Skip to main content

Posts

Showing posts from January, 2026

ಬಾದಾಮಿ ಚಾಲುಕ್ಯರು (ಕ್ರಿ.ಶ. 543 - 755): ಪರೀಕ್ಷಾ-ಕೇಂದ್ರಿತ ಪ್ರಮುಖ ಪ್ರಶ್ನೋತ್ತರಗಳು

 ​🏛️ ಬಾದಾಮಿ ಚಾಲುಕ್ಯರು (ಕ್ರಿ.ಶ. 543 - 755): ಪರೀಕ್ಷಾ-ಕೇಂದ್ರಿತ ಪ್ರಮುಖ ಪ್ರಶ್ನೋತ್ತರಗಳು ಇತಿಹಾಸ ವಿಭಾಗದಲ್ಲಿ ನಮ್ಮ ಕರ್ನಾಟಕದ ಕೀರ್ತಿ ಪತಾಕೆಯನ್ನು ನರ್ಮದಾ ನದಿಯಿಂದ ಕಾವೇರಿಯವರೆಗೆ ಹಾರಿಸಿದ, ಕಲೆ ಮತ್ತು ವಾಸ್ತುಶಿಲ್ಪದ ತೊಟ್ಟಿಲು ಎನಿಸಿಕೊಂಡ 'ಬಾದಾಮಿ ಚಾಲುಕ್ಯರ' ಇತಿಹಾಸ ಅತ್ಯಂತ ಪ್ರಮುಖವಾದದ್ದು. ಇಮ್ಮಡಿ ಪುಲಕೇಶಿಯ ಸಾಹಸ, ಐಹೊಳೆ ಶಾಸನ ಮತ್ತು ಪಟ್ಟದಕಲ್ಲಿನ ಶಿಲ್ಪಕಲೆ ಬಹಳ ಪ್ರಮುಖವಾದವುಗಳು.ಬನ್ನಿ, ನಮ್ಮ ಕರುನಾಡಿನ ಈ ಹೆಮ್ಮೆಯ ಇತಿಹಾಸವನ್ನು ಕೆಲವು ಪ್ರಮುಖ ಪ್ರಶ್ನೋತ್ತರಗಳ ಮೂಲಕ ತಿಳಿಯೋಣ. 💠 ಬಾದಾಮಿ ಚಾಲುಕ್ಯರ ಮೂಲ, ಸ್ಥಾಪನೆ ಮತ್ತು ಲಾಂಛನ 1) ​ಕರ್ನಾಟಕದಲ್ಲಿ ಕದಂಬರ ನಂತರ ಬಂದ ಪ್ರಬಲ ರಾಜವಂಶ ಯಾವುದು? ​ಉತ್ತರ: ಬಾದಾಮಿ ಚಾಲುಕ್ಯರು. 2) ​ಬಾದಾಮಿ ಚಾಲುಕ್ಯರ ರಾಜಧಾನಿ ಯಾವುದಾಗಿತ್ತು? ​ಉತ್ತರ: ಬಾದಾಮಿ (ಇದರ ಹಳೆಯ ಹೆಸರು ವಾತಾಪಿ). 3) ​ಬಾದಾಮಿ ಪ್ರಸ್ತುತ ಯಾವ ಜಿಲ್ಲೆಯಲ್ಲಿದೆ? ​ಉತ್ತರ: ಬಾಗಲಕೋಟೆ ಜಿಲ್ಲೆ. 4) ​ಚಾಲುಕ್ಯರ ರಾಜಲಾಂಛನ (Emblem) ಯಾವುದಾಗಿತ್ತು? (V. Imp) ​ಉತ್ತರ: ವರಾಹ (ಹಂದಿ). 5) ​ಚಾಲುಕ್ಯರು ಮೂಲತಃ ಎಲ್ಲಿಯವರು ಎಂಬ ಬಗ್ಗೆ ಇತಿಹಾಸಕಾರರಲ್ಲಿರುವ ಪ್ರಮುಖ ವಾದ ಯಾವುದು? ​ಉತ್ತರ: ಅವರು ಅಪ್ಪಟ ಕನ್ನಡಿಗರು (ಸ್ಥಳೀಯರು) ಎಂಬ ವಾದವೇ ಹೆಚ್ಚು ಪ್ರಬಲವಾಗಿದೆ. 6) ​ಚಾಲುಕ್ಯರ ಆಡಳಿತ ಭಾಷೆ ಯಾವುದಾಗಿತ್ತು? ​ಉತ್ತರ: ಕನ್ನಡ ಮತ್ತು ಸಂಸ್ಕೃತ. 7) ​ಚಾಲುಕ್ಯ ...

ಕಂಚಿಯ ಪಲ್ಲವರು (Pallavas of Kanchi): ಪರೀಕ್ಷಾ ಕೇಂದ್ರಿತ ಮುಖ್ಯ ಪ್ರಶ್ನೋತ್ತರಗಳು

🏗️ ಕಂಚಿಯ ಪಲ್ಲವರು (Pallavas of Kanchi): ಪರೀಕ್ಷಾ ಕೇಂದ್ರಿತ ಮುಖ್ಯ ಪ್ರಶ್ನೋತ್ತರಗಳು   ನಮಸ್ಕಾರ ವಿದ್ಯಾರ್ಥಿ ಮಿತ್ರರೇ, ಬಾದಾಮಿ ಚಾಲುಕ್ಯರ ಬದ್ಧ ವೈರಿಗಳಾಗಿದ್ದರೂ, ದಕ್ಷಿಣ ಭಾರತದಲ್ಲಿ ಕಲ್ಲಿನ ದೇವಾಲಯಗಳನ್ನು ನಿರ್ಮಿಸುವ ಕಲೆಯನ್ನು (ಶಿಲ್ಪಕಲೆ) ಆರಂಭಿಸಿದ ಕೀರ್ತಿ ಪಲ್ಲವರಿಗೆ ಸಲ್ಲುತ್ತದೆ. ಮಾಮಲ್ಲಪುರಂನ ರಥಗಳು ಮತ್ತು ಕಂಚಿಯ ದೇವಾಲಯಗಳು ಇಂದಿಗೂ ಅವರ ವೈಭವವನ್ನು ಸಾರುತ್ತಿವೆ. ಬನ್ನಿ, ಈ ಸಾಮ್ರಾಜ್ಯದ ಇತಿಹಾಸವನ್ನು ಕೆಲವು ಪ್ರಶ್ನೋತ್ತರಗಳು ಮೂಲಕ ತಿಳಿಯೋಣ. 1) ಪಲ್ಲವರ ರಾಜಧಾನಿ ಯಾವುದಾಗಿತ್ತು? ಉತ್ತರ: ಕಂಚಿ ಅಥವಾ ಕಂಚೀಪುರಂ (ತಮಿಳುನಾಡು). 2) ಪಲ್ಲವರ ರಾಜ ಲಾಂಛನ (Emblem) ಯಾವುದು? ಉತ್ತರ: ನಂದಿ (ಗೂಳಿ). 3) ಪಲ್ಲವರು ಮೂಲತಃ ಯಾರು ಎಂದು ಹೆಚ್ಚಿನ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ? ಉತ್ತರ: ಅವರು ಶಾತವಾಹನರ ಸಾಮಂತರಾಗಿದ್ದು, ನಂತರ ಸ್ವತಂತ್ರರಾದರು (ಪ್ರಾದೇಶಿಕ ಮೂಲ). 4) ಪಲ್ಲವ ವಂಶದ ಸ್ಥಾಪಕ ಯಾರು? ಉತ್ತರ: ಸಿಂಹವರ್ಮ (ಆರಂಭಿಕ), ಆದರೆ "ಇಂಪೀರಿಯಲ್ ಪಲ್ಲವ" ವಂಶದ ಸ್ಥಾಪಕ ಸಿಂಹವಿಷ್ಣು. 5) ಸಮುದ್ರಗುಪ್ತನು ತನ್ನ ದಕ್ಷಿಣ ದಂಡಯಾತ್ರೆಯಲ್ಲಿ ಸೋಲಿಸಿದ ಪಲ್ಲವ ರಾಜ ಯಾರು? ಉತ್ತರ: ವಿಷ್ಣುಗೋಪ. 6) ಪಲ್ಲವರ ಆಡಳಿತ ಭಾಷೆಗಳು ಯಾವವು? ಉತ್ತರ: ಸಂಸ್ಕೃತ (ಆರಂಭದಲ್ಲಿ), ನಂತರ ತಮಿಳು ಮತ್ತು ಪ್ರಾಕೃತ. 7) ಪಲ್ಲವರ ಆರಂಭಿಕ ಶಾಸನಗಳು ಯಾವ ಭಾಷೆಯಲ್ಲಿವೆ? ಉತ್ತರ: ಪ್ರಾಕೃತ ಮತ್ತ...

ಪಾಂಡ್ಯ ಸಾಮ್ರಾಜ್ಯ (Pandya Dynasty): ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪ್ರಶ್ನೋತ್ತರಗಳು

🐟 ಪಾಂಡ್ಯ ಸಾಮ್ರಾಜ್ಯ (Pandya Dynasty): ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪ್ರಶ್ನೋತ್ತರಗಳು ​ನಮಸ್ಕಾರ ವಿದ್ಯಾರ್ಥಿ ಮಿತ್ರರೇ, ಚೇರ ಮತ್ತು ಚೋಳರ ಜೊತೆಗೆ ಆಳಿದ ಪಾಂಡ್ಯರು ಸಂಗಮ್ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಇವರ ರಾಜಧಾನಿ ಮಧುರೈ ಇಂದಿಗೂ ತಮಿಳು ಸಂಸ್ಕೃತಿಯ ಕೇಂದ್ರವಾಗಿದೆ. ಬನ್ನಿ, ಮೀನಿನ ಲಾಂಛನ ಹೊಂದಿದ್ದ ಈ ಸಾಮ್ರಾಜ್ಯದ ಇತಿಹಾಸವನ್ನು ಕೆಲವು ಪ್ರಶ್ನೋತ್ತರಗಳು ಮೂಲಕ ತಿಳಿಯೋಣ. ​ 1) ​ಪಾಂಡ್ಯರು ತಮಿಳುನಾಡಿನ ಯಾವ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದರು? ​ಉತ್ತರ: ದಕ್ಷಿಣ ತಮಿಳುನಾಡು (ಮಧುರೈ, ರಾಮನಾಥಪುರಂ, ತಿರುನಲ್ವೇಲಿ). 2) ​ಪಾಂಡ್ಯರ ರಾಜಧಾನಿ ಯಾವುದಾಗಿತ್ತು? ​ಉತ್ತರ: ಮಧುರೈ (Madurai). 3) ​ಪಾಂಡ್ಯರ ಪ್ರಮುಖ ಬಂದರು (Port) ಯಾವುದಾಗಿತ್ತು? ​ಉತ್ತರ: ಕೊರ್ಕೈ (Korkai) - ಮುತ್ತುಗಳಿಗೆ ಪ್ರಸಿದ್ಧ. 4) ​ಪಾಂಡ್ಯರ ರಾಜ ಲಾಂಛನ (Emblem) ಯಾವುದು? (V. Imp) ​ಉತ್ತರ: ಎರಡು ಮೀನುಗಳು (Twin Fish / Carp). 5) ​ಸಂಗಮ್ ಸಾಹಿತ್ಯದ ಮೂರು ಸಮ್ಮೇಳನಗಳಿಗೆ (Sangams) ಆಶ್ರಯ ನೀಡಿದ ರಾಜವಂಶ ಯಾವುದು? ​ಉತ್ತರ: ಪಾಂಡ್ಯರು. 6) ​ಪಾಂಡ್ಯರ ರಾಜ್ಯವನ್ನು "ಮುತ್ತುಗಳ ನಾಡು" ಎಂದು ಕರೆದವರು ಯಾರು? ​ಉತ್ತರ: ಮೆಗಸ್ತನೀಸ್ (ಇಂಡಿಕಾದಲ್ಲಿ). 7) ​ಮೆಗಸ್ತನೀಸ್ ಪ್ರಕಾರ ಪಾಂಡ್ಯ ರಾಜ್ಯವನ್ನು ಆಳಿದ ಮಹಿಳೆ ಯಾರು? ​ಉತ್ತರ: ಹೆರಾಕ್ಲಿಸ್ ನ ಮಗಳು (ಪಂಡೈ). 8) ​ಸಂಗಮ್ ಕಾಲದ ...

ಚೋಳ ಸಾಮ್ರಾಜ್ಯ (Chola Dynasty): ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಿತ ಪ್ರಮುಖ ಪ್ರಶ್ನೋತ್ತರಗಳು

🐯 ಚೋಳ ಸಾಮ್ರಾಜ್ಯ (Chola Dynasty): ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಿತ ಪ್ರಮುಖ ಪ್ರಶ್ನೋತ್ತರಗಳು ​ನಮಸ್ಕಾರ ಸ್ನೇಹಿತರೇ, ಭಾರತದ ಇತಿಹಾಸದಲ್ಲಿ ಸಮುದ್ರ ದಾಟಿ ಹೋಗಿ ರಾಜ್ಯ ಗೆದ್ದವರು ಯಾರಾದರೂ ಇದ್ದರೆ ಅದು ಚೋಳರು ಮಾತ್ರ. ತಂಜಾವೂರಿನ ಬೃಹದೀಶ್ವರ ದೇವಾಲಯ ಮತ್ತು ಅವರ ಗ್ರಾಮಾಡಳಿತ ಇಂದಿಗೂ ಮಾದರಿ. ಬನ್ನಿ, ಈ ಸಾಮ್ರಾಜ್ಯದ ಇತಿಹಾಸವನ್ನು ಕೆಲವು ಪ್ರಶ್ನೋತ್ತರಗಳು ಮೂಲಕ ತಿಳಿಯೋಣ. 1) ​ಚೋಳರ ರಾಜ ಲಾಂಛನ (Emblem) ಯಾವುದು? ​ಉತ್ತರ: ನೆಗೆಯುತ್ತಿರುವ ಹುಲಿ (Tiger). 2) ​ಸಂಗಮ್ ಯುಗದ ಚೋಳರ ಅತ್ಯಂತ ಪ್ರಸಿದ್ಧ ರಾಜ ಯಾರು? ​ಉತ್ತರ: ಕರಿಕಾಲ ಚೋಳ. 3) ​ಕಾವೇರಿ ನದಿಗೆ ಅಡ್ಡಲಾಗಿ 'ಕಲ್ಲನೈ' ಅಣೆಕಟ್ಟು (Grand Anicut) ಕಟ್ಟಿಸಿದವರು ಯಾರು? ​ಉತ್ತರ: ಕರಿಕಾಲ ಚೋಳ. 4) ​ಮಧ್ಯಕಾಲೀನ (Imperial) ಚೋಳ ಸಾಮ್ರಾಜ್ಯದ ಸ್ಥಾಪಕ ಯಾರು? ​ಉತ್ತರ: ವಿಜಯಾಲಯ ಚೋಳ (ಕ್ರಿ.ಶ 850). 5) ​ವಿಜಯಾಲಯ ಚೋಳನು ತಂಜಾವೂರನ್ನು ಯಾರಿಂದ ಗೆದ್ದುಕೊಂಡನು? ​ಉತ್ತರ: ಮುತ್ತರಾಯರು (ಪಲ್ಲವರ ಸಾಮಂತರು). 6) ​ವಿಜಯಾಲಯ ಚೋಳನು ತಂಜಾವೂರಿನಲ್ಲಿ ಯಾವ ದೇವಿಯ ದೇವಾಲಯ ನಿರ್ಮಿಸಿದನು? ​ಉತ್ತರ: ನಿಶುಂಭಸೂದಿನಿ (ದುರ್ಗೆ). 7) ​ಚೋಳರ ರಾಜಧಾನಿ ಯಾವುದಾಗಿತ್ತು? ​ಉತ್ತರ: ತಂಜಾವೂರು (ನಂತರ ಗಂಗೈಕೊಂಡ ಚೋಳಪುರಂ). 8) ​ಪಲ್ಲವ ವಂಶದ ಕೊನೆಯ ರಾಜ ಅಪರಾಜಿತನನ್ನು ಸೋಲಿಸಿದ ಚೋಳ ರಾಜ ಯಾರು? ​ಉತ್ತರ: ಒಂದನೇ ಆದಿತ್ಯ (Aditya I). 9) ​...

ಚೇರ ಸಾಮ್ರಾಜ್ಯ (Chera Dynasty): ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಿತ ಪ್ರಮುಖ ಪ್ರಶ್ನೋತ್ತರಗಳು

​🏹 ಚೇರ ಸಾಮ್ರಾಜ್ಯ (Chera Dynasty): ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಿತ ಪ್ರಮುಖ ಪ್ರಶ್ನೋತ್ತರಗಳು ​ನಮಸ್ಕಾರ ವಿದ್ಯಾರ್ಥಿ ಮಿತ್ರರೇ, ಚೇರರು ಮಲಯಾಳಂ ಅಥವಾ ಕೇರಳದ ಮೂಲಪುರುಷರು ಎನ್ನಬಹುದು. ಸಮುದ್ರ ವ್ಯಾಪಾರದಲ್ಲಿ ಇವರು ಎತ್ತಿದ ಕೈ. "ಬಿಲ್ಲು ಮತ್ತು ಬಾಣ" ಇವರ ಗುರುತು. ಬನ್ನಿ, ಈ ಚೇರರ ಇತಿಹಾಸವನ್ನು ಕೆಲವು ಪ್ರಶ್ನೋತ್ತರಗಳು ಮೂಲಕ ತಿಳಿಯೋಣ. 1) ​ಸಂಗಮ್ ಯುಗದ ಚೇರರು ಪ್ರಸ್ತುತ ಭಾರತದ ಯಾವ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದರು? ​ಉತ್ತರ: ಕೇರಳ (ಮತ್ತು ತಮಿಳುನಾಡಿನ ಕೊಂಗು ಪ್ರದೇಶ). 2) ​ಚೇರರನ್ನು ಬೇರೆ ಯಾವ ಹೆಸರುಗಳಿಂದ ಕರೆಯಲಾಗುತ್ತಿತ್ತು? ​ಉತ್ತರ: ಕೇರಳಪುತ್ರರು (ಅಶೋಕನ ಶಾಸನದಲ್ಲಿ) ಮತ್ತು ಕುಟ್ಟುವನ್. 3) ​ಚೇರರ ರಾಜಧಾನಿ ಯಾವುದಾಗಿತ್ತು? ​ಉತ್ತರ: ವಂಜಿ (Vanji) ಅಥವಾ ಕರೂರು. 4) ​ಚೇರರ ಪ್ರಮುಖ ಬಂದರುಗಳು ಯಾವುವು? ​ಉತ್ತರ: ಮುಜಿರಿಸ್ (Muziris) ಮತ್ತು ತೊಂಡಿ (Tondi). 5) ​ಚೇರರ ರಾಜ ಲಾಂಛನ (Royal Emblem) ಯಾವುದು? (V. Imp) ​ಉತ್ತರ: ಬಿಲ್ಲು ಮತ್ತು ಬಾಣ (Bow and Arrow). 6) ​ಚೇರ ರಾಜರು ಧರಿಸುತ್ತಿದ್ದ ಹೂವಿನ ಮಾಲೆ ಯಾವುದು? ​ಉತ್ತರ: ಪನಂ ಹೂವಿನ ಮಾಲೆ (Palmyra flower). 7) ​ಅಶೋಕನ ಎಷ್ಟನೇ ಶಾಸನದಲ್ಲಿ 'ಕೇರಳಪುತ್ರ' (ಚೇರರು) ಎಂದು ಉಲ್ಲೇಖಿಸಲಾಗಿದೆ? ​ಉತ್ತರ: 2ನೇ ಬಂಡೆಗಲ್ಲು ಶಾಸನದಲ್ಲಿ. 8) ​ರೋಮನ್ನರೊಂದಿಗೆ ಅತಿ ಹೆಚ್ಚು ವ್ಯಾಪಾರ ಸಂಪ...

ನಂದ ರಾಜವಂಶ (Nanda Dynasty): ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಿತ ಪ್ರಶ್ನೋತ್ತರಗಳು

🐘 ನಂದ ರಾಜವಂಶ (Nanda Dynasty): ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಿತ ಪ್ರಶ್ನೋತ್ತರಗಳು ಮಗಧ ಸಾಮ್ರಾಜ್ಯವನ್ನು ಒಂದು ಬೃಹತ್ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿದ ಮತ್ತು ಭಾರತದ ಇತಿಹಾಸದಲ್ಲೇ "ಮೊದಲ ಸಾಮ್ರಾಜ್ಯ ನಿರ್ಮಾಪಕರು" (First Empire Builders) ಎಂದು ಕರೆಯಲ್ಪಡುವ ನಂದ ರಾಜವಂಶ (Nanda Dynasty). ಶಿಶುನಾಗ ವಂಶದ ನಂತರ ಬಂದ ನಂದರು ಭಾರತದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿದರು. ಇವರ ಕಾಲದಲ್ಲೇ ಅಲೆಕ್ಸಾಂಡರ್ ಭಾರತಕ್ಕೆ ಬಂದಿದ್ದು ಮತ್ತು ಚಾಣಕ್ಯ-ಚಂದ್ರಗುಪ್ತ ಮೌರ್ಯರ ಕ್ರಾಂತಿ ನಡೆದಿದ್ದು. ಬನ್ನಿ, ಈ ರೋಚಕ ಇತಿಹಾಸವನ್ನು ಕೆಲವು ಪ್ರಶ್ನೋತ್ತರಗಳ ಮುಖಾಂತರ ತಿಳಿಯೋಣ. 👑 ಮಹಾಪದ್ಮನಂದ (ಸ್ಥಾಪಕ) - (ಕ್ರಿ.ಪೂ 345 - 329) 1) ನಂದ ರಾಜವಂಶದ ಸ್ಥಾಪಕ ಯಾರು? ಉತ್ತರ: ಮಹಾಪದ್ಮನಂದ (Mahapadmananda). 2) ಭಾರತದ ಇತಿಹಾಸದಲ್ಲಿ "ಮೊದಲ ಸಾಮ್ರಾಜ್ಯ ನಿರ್ಮಾಪಕ" ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಮಹಾಪದ್ಮನಂದ. 3) ಮಹಾಪದ್ಮನಂದನು ಯಾವ ವರ್ಣಕ್ಕೆ ಸೇರಿದವನು ಎಂದು ಹೇಳಲಾಗುತ್ತದೆ? ಉತ್ತರ: ಶೂದ್ರ (ಕ್ಷೌರಿಕನ ಮಗ). 4) ಭಾರತದ "ಮೊದಲ ಕ್ಷತ್ರಿಯೇತರ ರಾಜವಂಶ" (First Non-Kshatriya Dynasty) ಯಾವುದು? ಉತ್ತರ: ನಂದ ರಾಜವಂಶ. 5) ಪುರಾಣಗಳಲ್ಲಿ ಮಹಾಪದ್ಮನಂದನಿಗೆ ನೀಡಿರುವ ಪ್ರಸಿದ್ಧ ಬಿರುದು ಯಾವುದು? ಉತ್ತರ: ಸರ್ವಕ್ಷತ್ರಾಂತಕ (ಎಲ್ಲಾ ಕ್ಷತ್ರಿಯರ ನಾಶಕ). 6) ಮಹಾಪದ...