🏛️ ಬಾದಾಮಿ ಚಾಲುಕ್ಯರು (ಕ್ರಿ.ಶ. 543 - 755): ಪರೀಕ್ಷಾ-ಕೇಂದ್ರಿತ ಪ್ರಮುಖ ಪ್ರಶ್ನೋತ್ತರಗಳು ಇತಿಹಾಸ ವಿಭಾಗದಲ್ಲಿ ನಮ್ಮ ಕರ್ನಾಟಕದ ಕೀರ್ತಿ ಪತಾಕೆಯನ್ನು ನರ್ಮದಾ ನದಿಯಿಂದ ಕಾವೇರಿಯವರೆಗೆ ಹಾರಿಸಿದ, ಕಲೆ ಮತ್ತು ವಾಸ್ತುಶಿಲ್ಪದ ತೊಟ್ಟಿಲು ಎನಿಸಿಕೊಂಡ 'ಬಾದಾಮಿ ಚಾಲುಕ್ಯರ' ಇತಿಹಾಸ ಅತ್ಯಂತ ಪ್ರಮುಖವಾದದ್ದು. ಇಮ್ಮಡಿ ಪುಲಕೇಶಿಯ ಸಾಹಸ, ಐಹೊಳೆ ಶಾಸನ ಮತ್ತು ಪಟ್ಟದಕಲ್ಲಿನ ಶಿಲ್ಪಕಲೆ ಬಹಳ ಪ್ರಮುಖವಾದವುಗಳು.ಬನ್ನಿ, ನಮ್ಮ ಕರುನಾಡಿನ ಈ ಹೆಮ್ಮೆಯ ಇತಿಹಾಸವನ್ನು ಕೆಲವು ಪ್ರಮುಖ ಪ್ರಶ್ನೋತ್ತರಗಳ ಮೂಲಕ ತಿಳಿಯೋಣ. 💠 ಬಾದಾಮಿ ಚಾಲುಕ್ಯರ ಮೂಲ, ಸ್ಥಾಪನೆ ಮತ್ತು ಲಾಂಛನ 1) ಕರ್ನಾಟಕದಲ್ಲಿ ಕದಂಬರ ನಂತರ ಬಂದ ಪ್ರಬಲ ರಾಜವಂಶ ಯಾವುದು? ಉತ್ತರ: ಬಾದಾಮಿ ಚಾಲುಕ್ಯರು. 2) ಬಾದಾಮಿ ಚಾಲುಕ್ಯರ ರಾಜಧಾನಿ ಯಾವುದಾಗಿತ್ತು? ಉತ್ತರ: ಬಾದಾಮಿ (ಇದರ ಹಳೆಯ ಹೆಸರು ವಾತಾಪಿ). 3) ಬಾದಾಮಿ ಪ್ರಸ್ತುತ ಯಾವ ಜಿಲ್ಲೆಯಲ್ಲಿದೆ? ಉತ್ತರ: ಬಾಗಲಕೋಟೆ ಜಿಲ್ಲೆ. 4) ಚಾಲುಕ್ಯರ ರಾಜಲಾಂಛನ (Emblem) ಯಾವುದಾಗಿತ್ತು? (V. Imp) ಉತ್ತರ: ವರಾಹ (ಹಂದಿ). 5) ಚಾಲುಕ್ಯರು ಮೂಲತಃ ಎಲ್ಲಿಯವರು ಎಂಬ ಬಗ್ಗೆ ಇತಿಹಾಸಕಾರರಲ್ಲಿರುವ ಪ್ರಮುಖ ವಾದ ಯಾವುದು? ಉತ್ತರ: ಅವರು ಅಪ್ಪಟ ಕನ್ನಡಿಗರು (ಸ್ಥಳೀಯರು) ಎಂಬ ವಾದವೇ ಹೆಚ್ಚು ಪ್ರಬಲವಾಗಿದೆ. 6) ಚಾಲುಕ್ಯರ ಆಡಳಿತ ಭಾಷೆ ಯಾವುದಾಗಿತ್ತು? ಉತ್ತರ: ಕನ್ನಡ ಮತ್ತು ಸಂಸ್ಕೃತ. 7) ಚಾಲುಕ್ಯ ...
ನಮಸ್ಕಾರ ಸ್ನೇಹಿತರೇ, ಭಾರತದ ಇತಿಹಾಸದಲ್ಲಿ ಸಮುದ್ರ ದಾಟಿ ಹೋಗಿ ರಾಜ್ಯ ಗೆದ್ದವರು ಯಾರಾದರೂ ಇದ್ದರೆ ಅದು ಚೋಳರು ಮಾತ್ರ. ತಂಜಾವೂರಿನ ಬೃಹದೀಶ್ವರ ದೇವಾಲಯ ಮತ್ತು ಅವರ ಗ್ರಾಮಾಡಳಿತ ಇಂದಿಗೂ ಮಾದರಿ. ಬನ್ನಿ, ಈ ಸಾಮ್ರಾಜ್ಯದ ಇತಿಹಾಸವನ್ನು ಕೆಲವು ಪ್ರಶ್ನೋತ್ತರಗಳು ಮೂಲಕ ತಿಳಿಯೋಣ.
1) ಚೋಳರ ರಾಜ ಲಾಂಛನ (Emblem) ಯಾವುದು?
ಉತ್ತರ: ನೆಗೆಯುತ್ತಿರುವ ಹುಲಿ (Tiger).
2) ಸಂಗಮ್ ಯುಗದ ಚೋಳರ ಅತ್ಯಂತ ಪ್ರಸಿದ್ಧ ರಾಜ ಯಾರು?
ಉತ್ತರ: ಕರಿಕಾಲ ಚೋಳ.
3) ಕಾವೇರಿ ನದಿಗೆ ಅಡ್ಡಲಾಗಿ 'ಕಲ್ಲನೈ' ಅಣೆಕಟ್ಟು (Grand Anicut) ಕಟ್ಟಿಸಿದವರು ಯಾರು?
ಉತ್ತರ: ಕರಿಕಾಲ ಚೋಳ.
4) ಮಧ್ಯಕಾಲೀನ (Imperial) ಚೋಳ ಸಾಮ್ರಾಜ್ಯದ ಸ್ಥಾಪಕ ಯಾರು?
ಉತ್ತರ: ವಿಜಯಾಲಯ ಚೋಳ (ಕ್ರಿ.ಶ 850).
5) ವಿಜಯಾಲಯ ಚೋಳನು ತಂಜಾವೂರನ್ನು ಯಾರಿಂದ ಗೆದ್ದುಕೊಂಡನು?
ಉತ್ತರ: ಮುತ್ತರಾಯರು (ಪಲ್ಲವರ ಸಾಮಂತರು).
6) ವಿಜಯಾಲಯ ಚೋಳನು ತಂಜಾವೂರಿನಲ್ಲಿ ಯಾವ ದೇವಿಯ ದೇವಾಲಯ ನಿರ್ಮಿಸಿದನು?
ಉತ್ತರ: ನಿಶುಂಭಸೂದಿನಿ (ದುರ್ಗೆ).
7) ಚೋಳರ ರಾಜಧಾನಿ ಯಾವುದಾಗಿತ್ತು?
ಉತ್ತರ: ತಂಜಾವೂರು (ನಂತರ ಗಂಗೈಕೊಂಡ ಚೋಳಪುರಂ).
8) ಪಲ್ಲವ ವಂಶದ ಕೊನೆಯ ರಾಜ ಅಪರಾಜಿತನನ್ನು ಸೋಲಿಸಿದ ಚೋಳ ರಾಜ ಯಾರು?
ಉತ್ತರ: ಒಂದನೇ ಆದಿತ್ಯ (Aditya I).
9) 'ಮಧುರೈಕೊಂಡ' (ಮಧುರೈ ಗೆದ್ದವನು) ಎಂಬ ಬಿರುದು ಹೊಂದಿದ್ದ ಚೋಳ ರಾಜ ಯಾರು?
ಉತ್ತರ: ಒಂದನೇ ಪರಾಂತಕ (Parantaka I).
10) ಒಂದನೇ ಪರಾಂತಕನು ಚಿದಂಬರಂ ದೇವಾಲಯಕ್ಕೆ ಯಾವ ಹೊದಿಕೆ ಹೊದಿಸಿದನು?
ಉತ್ತರ: ಚಿನ್ನದ ಹೊದಿಕೆ (Golden Roof).
11) ರಾಷ್ಟ್ರಕೂಟರ 3ನೇ ಕೃಷ್ಣನ ವಿರುದ್ಧ 'ತಕ್ಕೋಲಂ ಕದನ'ದಲ್ಲಿ (ಕ್ರಿ.ಶ 949) ಸೋತ ಚೋಳ ರಾಜ ಯಾರು?
ಉತ್ತರ: ಒಂದನೇ ಪರಾಂತಕ (ಅವನ ಮಗ ರಾಜಾದಿತ್ಯ ಮರಣ ಹೊಂದಿದನು).
12) ಚೋಳ ವಂಶದ ಅತ್ಯಂತ ಶ್ರೇಷ್ಠ ದೊರೆಗಳಲ್ಲಿ ಒಬ್ಬನಾದ ರಾಜರಾಜ ಚೋಳನ ಮೂಲ ಹೆಸರೇನು?
ಉತ್ತರ: ಅರುಳ್‌ಮೊಳಿ ವರ್ಮನ್.
13) ರಾಜರಾಜ ಚೋಳನು ಯಾವ ದೇವರ ಪರಮ ಭಕ್ತನಾಗಿದ್ದನು?
ಉತ್ತರ: ಶಿವ (ಶಿವಪಾದಶೇಖರ ಎಂಬ ಬಿರುದಿತ್ತು).
14) ತಂಜಾವೂರಿನ ಪ್ರಸಿದ್ಧ 'ಬೃಹದೀಶ್ವರ ದೇವಾಲಯ'ವನ್ನು (ರಾಜರಾಜೇಶ್ವರ) ನಿರ್ಮಿಸಿದವರು ಯಾರು? (V. Imp)
ಉತ್ತರ: ಒಂದನೇ ರಾಜರಾಜ ಚೋಳ.
15) ಬೃಹದೀಶ್ವರ ದೇವಾಲಯದ ನಿರ್ಮಾಣ ಪೂರ್ಣಗೊಂಡ ವರ್ಷ ಯಾವುದು?
ಉತ್ತರ: ಕ್ರಿ.ಶ 1010.
16) ರಾಜರಾಜ ಚೋಳನು ಕೇರಳದ ಚೇರರನ್ನು ಯಾವ ಕದನದಲ್ಲಿ ಸೋಲಿಸಿದನು?
ಉತ್ತರ: ಕಂದಳೂರು ಸಾಲೈ ಕದನ.
17) ಶ್ರೀಲಂಕಾದ (ಸಿಲೋನ್) ಮೇಲೆ ದಾಳಿ ಮಾಡಿ ಅದರ ಉತ್ತರ ಭಾಗವನ್ನು ಗೆದ್ದ ಚೋಳ ರಾಜ ಯಾರು?
ಉತ್ತರ: ಒಂದನೇ ರಾಜರಾಜ ಚೋಳ.
18) ರಾಜರಾಜ ಚೋಳನು ಶ್ರೀಲಂಕಾದಲ್ಲಿ ನಿರ್ಮಿಸಿದ ಶಿವ ದೇವಾಲಯ ಯಾವುದು?
ಉತ್ತರ: ಪೋಲನ್ನರುವಾದಲ್ಲಿರುವ ಶಿವಾಲಯ.
19) ಮಾಲ್ಡೀವ್ಸ್ (Maldives) ದ್ವೀಪಗಳನ್ನು ಗೆದ್ದ ಮೊದಲ ಚೋಳ ರಾಜ ಯಾರು?
ಉತ್ತರ: ಒಂದನೇ ರಾಜರಾಜ ಚೋಳ.
20) ರಾಜರಾಜ ಚೋಳನು ಭೂಮಾಪನ (Land Survey) ಮಾಡಿಸಿದನೇ?
ಉತ್ತರ: ಹೌದು, ಅದಕ್ಕಾಗಿ 'ಉಲಗಳಂದ ಪೆರುಮಾಳ್' ಎಂದು ಕರೆಸಿಕೊಂಡನು.
21) ನಾಗಪಟ್ಟಣಂನಲ್ಲಿ ಬೌದ್ಧ ವಿಹಾರ (ಚೂಡಾಮಣಿ ವಿಹಾರ) ಕಟ್ಟಲು ಅನುಮತಿ ಪಡೆದ ಶೈಲೇಂದ್ರ ವಂಶದ ರಾಜ ಯಾರು?
ಉತ್ತರ: ಶ್ರೀಮಾರ ವಿಜಯೋತ್ತುಂಗವರ್ಮನ್ (ಇವನಿಗೆ ರಾಜರಾಜ ಚೋಳ ಸಹಾಯ ಮಾಡಿದನು).
22) ರಾಜರಾಜ ಚೋಳನ ಪ್ರಸಿದ್ಧ ಸಹೋದರಿ ಯಾರು?
ಉತ್ತರ: ಕುಂದವೈ (Kundavai).
23) ರಾಜರಾಜ ಚೋಳನ ಮಗ ಮತ್ತು ಉತ್ತರಾಧಿಕಾರಿ ಯಾರು?
ಉತ್ತರ: ಒಂದನೇ ರಾಜೇಂದ್ರ ಚೋಳ.
24) ಇಡೀ ಶ್ರೀಲಂಕಾವನ್ನು (ಸಿಲೋನ್) ಸಂಪೂರ್ಣವಾಗಿ ಗೆದ್ದ ಚೋಳ ರಾಜ ಯಾರು?
ಉತ್ತರ: ಒಂದನೇ ರಾಜೇಂದ್ರ ಚೋಳ.
25) ರಾಜೇಂದ್ರ ಚೋಳನು ಸೆರೆಹಿಡಿದ ಶ್ರೀಲಂಕಾದ ರಾಜ ಯಾರು?
ಉತ್ತರ: 5ನೇ ಮಹಿಂದ (Mahinda V).
26) ಗಂಗಾ ನದಿಯವರೆಗೂ ದಂಡಯಾತ್ರೆ ಕೈಗೊಂಡು ಬಂಗಾಳದ ಮಹಿಪಾಲನನ್ನು ಸೋಲಿಸಿದ ಚೋಳ ರಾಜ ಯಾರು?
ಉತ್ತರ: ಒಂದನೇ ರಾಜೇಂದ್ರ ಚೋಳ.
27) ಗಂಗಾ ವಿಜಯದ ನೆನಪಿಗಾಗಿ ರಾಜೇಂದ್ರನು ಧರಿಸಿದ ಬಿರುದು ಯಾವುದು? (V. Imp)
ಉತ್ತರ: ಗಂಗೈಕೊಂಡ ಚೋಳ.
28) ರಾಜೇಂದ್ರ ಚೋಳನು ನಿರ್ಮಿಸಿದ ಹೊಸ ರಾಜಧಾನಿ ಯಾವುದು?
ಉತ್ತರ: ಗಂಗೈಕೊಂಡ ಚೋಳಪುರಂ.
29) ಗಂಗೈಕೊಂಡ ಚೋಳಪುರಂನಲ್ಲಿ ರಾಜೇಂದ್ರನು ನಿರ್ಮಿಸಿದ ಬೃಹತ್ ಕೆರೆಯ ಹೆಸರೇನು?
ಉತ್ತರ: ಚೋಳಗಂಗಮ್ (Cholagangam).
30) ಆಗ್ನೇಯ ಏಷ್ಯಾದ 'ಶ್ರೀವಿಜಯ' (ಇಂಡೋನೇಷ್ಯಾ/ಮಲೇಷ್ಯಾ) ಸಾಮ್ರಾಜ್ಯದ ಮೇಲೆ ನೌಕಾದಾಳಿ ಮಾಡಿದವರು ಯಾರು?
ಉತ್ತರ: ಒಂದನೇ ರಾಜೇಂದ್ರ ಚೋಳ.
31) ಶ್ರೀವಿಜಯದ (ಕಡಾರಂ) ರಾಜ ಸಂಗ್ರಾಮ ವಿಜಯೋತ್ತುಂಗವರ್ಮನನ್ನು ಸೋಲಿಸಿದವನು ಯಾರು?
ಉತ್ತರ: ರಾಜೇಂದ್ರ ಚೋಳ.
32) 'ಕಡಾರಂ ಕೊಂಡ' (ಕಡಾರಂ ಗೆದ್ದವನು) ಎಂಬ ಬಿರುದು ಯಾರಿಗಿತ್ತು?
ಉತ್ತರ: ಒಂದನೇ ರಾಜೇಂದ್ರ ಚೋಳ.
33) 'ಪಂಡಿತ ಚೋಳ' ಎಂಬ ಬಿರುದು ಯಾರಿಗೆ ಇತ್ತು?
ಉತ್ತರ: ಒಂದನೇ ರಾಜೇಂದ್ರ ಚೋಳ.
34) ಬಂಗಾಳ ಕೊಲ್ಲಿಯನ್ನು (Bay of Bengal) 'ಚೋಳರ ಸರೋವರ'ವನ್ನಾಗಿ (Chola Lake) ಪರಿವರ್ತಿಸಿದವರು ಯಾರು?
ಉತ್ತರ: ರಾಜೇಂದ್ರ ಚೋಳ (ತನ್ನ ಬಲಿಷ್ಠ ನೌಕಾಪಡೆಯಿಂದ).
35) ರಾಜೇಂದ್ರ ಚೋಳನು ವೇದ ಅದ್ಯಯನಕ್ಕಾಗಿ ಎಲ್ಲಿ ಕಾಲೇಜನ್ನು ಸ್ಥಾಪಿಸಿದನು?
ಉತ್ತರ: ಎಣ್ಣಾಯಿರಂ (Ennayiram - ದಕ್ಷಿಣ ಆರ್ಕಾಟ್).
36) ಚೋಳರ ಆಡಳಿತದ ಅತ್ಯಂತ ಪ್ರಮುಖ ಲಕ್ಷಣ ಯಾವುದು? (Most Repeated)
ಉತ್ತರ: ಸ್ಥಳೀಯ ಸ್ವಯಂ ಆಡಳಿತ (Local Self Government) ಅಥವಾ ಗ್ರಾಮಾಡಳಿತ.
37) ಚೋಳರ ಗ್ರಾಮಾಡಳಿತದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಶಾಸನ ಯಾವುದು?
ಉತ್ತರ: ಉತ್ತರಮೇರೂರು ಶಾಸನ (Uthiramerur Inscription).
38) ಉತ್ತರಮೇರೂರು ಶಾಸನವು ಯಾವ ರಾಜನ ಕಾಲದ್ದು?
ಉತ್ತರ: ಒಂದನೇ ಪರಾಂತಕ (Parantaka I).
39) ಚೋಳರ ಕಾಲದಲ್ಲಿ ಬ್ರಾಹ್ಮಣರಿಗೆ ದಾನ ನೀಡಿದ ಹಳ್ಳಿಗಳನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಬ್ರಹ್ಮದೇಯ ಅಥವಾ ಅಗ್ರಹಾರ.
40) ಸಾಮಾನ್ಯ ಹಳ್ಳಿಗಳ ಸಭೆಯನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಊರ್ (Ur).
41) ಬ್ರಾಹ್ಮಣರ ಹಳ್ಳಿಗಳ (ಅಗ್ರಹಾರ) ಸಭೆಯನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಸಭಾ (Sabha) ಅಥವಾ ಮಹಾಸಭಾ.
42) ವ್ಯಾಪಾರಿಗಳ ಸಂಘವನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ನಗರಮ್ (Nagaram).
43) ಗ್ರಾಮ ಸಭೆಯ ಸದಸ್ಯರನ್ನು ಆಯ್ಕೆ ಮಾಡಲು ಬಳಸುತ್ತಿದ್ದ ಪದ್ಧತಿ ಯಾವುದು?
ಉತ್ತರ: ಕುಡವೋಲೈ ಪದ್ಧತಿ (Kudavolai System - ಲಾಟರಿ/ಚೀಟಿ ಎತ್ತುವ ಪದ್ಧತಿ).
44) ಚೋಳರ ಕಾಲದಲ್ಲಿ ಸಾಮ್ರಾಜ್ಯವನ್ನು ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು, ಅವುಗಳ ಹೆಸರೇನು?
ಉತ್ತರ: ಮಂಡಲಂ (Mandalam).
45) ಮಂಡಲಂಗಳನ್ನು ಎಷ್ಟಾಗಿ ವಿಂಗಡಿಸಲಾಗಿತ್ತು?
ಉತ್ತರ: ವಳನಾಡು (Valanadu - ಜಿಲ್ಲೆಗಳು).
46) ವಳನಾಡುಗಳ ವಿಭಾಗವೇನು?
ಉತ್ತರ: ನಾಡು (Nadu - ತಾಲೂಕುಗಳ ಗುಂಪು).
47) ಅತ್ಯಂತ ಚಿಕ್ಕ ಆಡಳಿತ ಘಟಕ ಯಾವುದಾಗಿತ್ತು?
ಉತ್ತರ: ಕುರ್ರಂ (Kurram - ಹಳ್ಳಿಗಳ ಗುಂಪು).
48) ಚೋಳರ ಕಾಲದಲ್ಲಿ ಭೂ ಕಂದಾಯ ಎಷ್ಟಿತ್ತು?
ಉತ್ತರ: ಉತ್ಪತ್ತಿಯ 1/3 ಭಾಗ.
49) ಚೋಳರ ಕಾಲದಲ್ಲಿ ಚಿನ್ನದ ನಾಣ್ಯವನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಕಾಸು (Kasu).
50) ಚೋಳರ ಸೈನ್ಯದಲ್ಲಿ ಅಂಗರಕ್ಷಕರ ಪಡೆಯನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ವೇಲೈಕ್ಕಾರರ್ (Velaikkarar - ಪ್ರಾಣಕೊಟ್ಟು ರಾಜನನ್ನು ಕಾಯುವವರು).
51) ಚೋಳರ ದೇವಾಲಯಗಳು ಯಾವ ಶೈಲಿಯಲ್ಲಿವೆ?
ಉತ್ತರ: ದ್ರಾವಿಡ ಶೈಲಿ (Dravidian Style).
52) ದ್ರಾವಿಡ ಶೈಲಿಯ ಪ್ರಮುಖ ಲಕ್ಷಣ ಯಾವುದು?
ಉತ್ತರ: ಪಿರಮಿಡ್ ಆಕಾರದ ವಿಮಾನ (Vimana) ಮತ್ತು ಗೋಪುರಗಳು.
53) ತಂಜಾವೂರಿನ ಬೃಹದೀಶ್ವರ ದೇವಾಲಯದ ವಿಮಾನದ ಎತ್ತರ ಎಷ್ಟು?
ಉತ್ತರ: 216 ಅಡಿ (ಆ ಕಾಲದ ಅತಿ ಎತ್ತರದ ಕಟ್ಟಡ).
54) ಬೃಹದೀಶ್ವರ ದೇವಾಲಯದ ಶಿಖರದ ಮೇಲಿರುವ ಏಕಶಿಲೆಯ ತೂಕ ಎಷ್ಟು?
ಉತ್ತರ: ಸುಮಾರು 80 ಟನ್.
55) ಚೋಳರ ಕಾಲದ ಅತ್ಯಂತ ಪ್ರಸಿದ್ಧ ಲೋಹದ ವಿಗ್ರಹ (Bronze Icon) ಯಾವುದು? (V. Imp)
ಉತ್ತರ: ನಟರಾಜ (Nataraja - ಕುಣಿಯುವ ಶಿವ).
56) ಗಂಗೈಕೊಂಡ ಚೋಳಪುರಂ ದೇವಾಲಯವನ್ನು ನಿರ್ಮಿಸಿದವರು ಯಾರು?
ಉತ್ತರ: ಒಂದನೇ ರಾಜೇಂದ್ರ ಚೋಳ.
57) ದಕ್ಷಿಣ ಭಾರತದ 'ಮೇರು' (Meru of South) ಎಂದು ಯಾವ ದೇವಾಲಯವನ್ನು ಕರೆಯುತ್ತಾರೆ?
ಉತ್ತರ: ಬೃಹದೀಶ್ವರ ದೇವಾಲಯ.
58) 'ಐರಾವತೇಶ್ವರ ದೇವಾಲಯ' (ದರಾಸುರಂ) ನಿರ್ಮಿಸಿದವರು ಯಾರು?
ಉತ್ತರ: ಎರಡನೇ ರಾಜರಾಜ ಚೋಳ.
59) ತಮಿಳು ರಾಮಾಯಣವನ್ನು (ರಾಮಾವತಾರಂ) ಬರೆದವರು ಯಾರು?
ಉತ್ತರ: ಕಂಬನ್ (Kamban).
60) ಕಂಬನ್ ಯಾರ ಆಸ್ಥಾನದಲ್ಲಿದ್ದನು?
ಉತ್ತರ: ಮೂರನೇ ಕುಲೋತ್ತುಂಗ ಚೋಳ (ಅಥವಾ ಆ ಕಾಲದವನು).
61) 'ಪೆರಿಯ ಪುರಾಣಂ' (Periya Puranam) ಬರೆದವರು ಯಾರು?
ಉತ್ತರ: ಸೇಕ್ಕಿಳಾರ್ (Sekkizhar).
62) 'ಕಲಿಂಗತ್ತುಪರಣಿ' (Kalingattuparani) ಎಂಬ ಯುದ್ಧ ಕಾವ್ಯ ಬರೆದವರು ಯಾರು?
ಉತ್ತರ: ಜಯಂಕೊಂಡಾರ್ (Jayamkondar).
63) ಚೋಳರ ಕಾಲದ ಮೂರು ರತ್ನಗಳು (Three Gems) ಯಾರು?
ಉತ್ತರ: ಒಟ್ಟಕೂತ್ತರ್, ಪುಗಳೇಂದಿ ಮತ್ತು ಕಂಬನ್ (ಕೆಲವು ಕಡೆ ಜಯಂಕೊಂಡಾರ್ ಸೇರಿಸುತ್ತಾರೆ).
64) 'ನಳವೆಂಬ' ಬರೆದ ಕವಿ ಯಾರು?
ಉತ್ತರ: ಪುಗಳೇಂದಿ.
65) 'ಸುಂಗಮ್ ತವಿರ್ಥ ಚೋಳ' (ತೆರಿಗೆ ರದ್ದು ಮಾಡಿದವನು) ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಒಂದನೇ ಕುಲೋತ್ತುಂಗ ಚೋಳ.
66) ಚಾಲುಕ್ಯ ಮತ್ತು ಚೋಳ ವಂಶಗಳನ್ನು ವಿಲೀನಗೊಳಿಸಿದ ರಾಜ ಯಾರು?
ಉತ್ತರ: ಒಂದನೇ ಕುಲೋತ್ತುಂಗ ಚೋಳ (ರಾಜೇಂದ್ರ ಚೋಳನ ಮೊಮ್ಮಗ).
67) ಕುಲೋತ್ತುಂಗ ಚೋಳನು 72 ಜನ ರಾಯಭಾರಿಗಳನ್ನು ಎಲ್ಲಿಗೆ ಕಳುಹಿಸಿದನು?
ಉತ್ತರ: ಚೀನಾ ದೇಶಕ್ಕೆ (ವ್ಯಾಪಾರಕ್ಕಾಗಿ).
68) ಚೋಳರ ಕೊನೆಯ ರಾಜ ಯಾರು?
ಉತ್ತರ: ಮೂರನೇ ರಾಜೇಂದ್ರ ಚೋಳ.
69) ಚೋಳ ಸಾಮ್ರಾಜ್ಯವನ್ನು ಅಂತಿಮವಾಗಿ ಸೋಲಿಸಿ ವಶಪಡಿಸಿಕೊಂಡವರು ಯಾರು?
ಉತ್ತರ: ಪಾಂಡ್ಯರು (ಮಾರವರ್ಮನ್ ಕುಲಶೇಖರ ಪಾಂಡ್ಯ).
70) ಚಿದಂಬರಂ ದೇವಾಲಯದ ನಟರಾಜ ವಿಗ್ರಹವನ್ನು ಸಮುದ್ರಕ್ಕೆ ಎಸೆದ ಚೋಳ ರಾಜ ಯಾರು ಎಂದು ರಾಮಾನುಜಾಚಾರ್ಯರ ಚರಿತ್ರೆ ಹೇಳುತ್ತದೆ?
ಉತ್ತರ: ಎರಡನೇ ಕುಲೋತ್ತುಂಗ (ಕ್ರಿಮಿಕಂಠ ಚೋಳ).
71) ಚೋಳರ ಕಾಲದಲ್ಲಿ ದೇವದಾಸಿ ಪದ್ಧತಿ ಇತ್ತೇ?
ಉತ್ತರ: ಹೌದು, ದೇವಾಲಯಗಳಲ್ಲಿ ನೃತ್ಯ ಮಾಡಲು 400ಕ್ಕೂ ಹೆಚ್ಚು ದೇವದಾಸಿಯರಿದ್ದರು (ತಂಜಾವೂರು ಶಾಸನದ ಪ್ರಕಾರ).
72) ಚೋಳರ ಕಾಲದ ಸಮಾಜದಲ್ಲಿ 'ವಲಂಗೈ' ಮತ್ತು 'ಇಡಂಗೈ' ಎಂದರೆ ಏನು?
ಉತ್ತರ: ಬಲಗೈ ಮತ್ತು ಎಡಗೈ ಜಾತಿಗಳ ಗುಂಪುಗಳು (Right & Left hand castes).
73) ವಿಷ್ಣುವಿನ ದಶಾವತಾರಗಳನ್ನು ಶಿಲ್ಪಕಲೆಯಲ್ಲಿ ಹೆಚ್ಚು ಬಳಸಿದ್ದು ಯಾರು?
ಉತ್ತರ: ಚೋಳರು.
74) 'ತ್ರಿಭುವನಂ'ನಲ್ಲಿರುವ ಕಂಪಹರೇಶ್ವರ ದೇವಾಲಯ ನಿರ್ಮಿಸಿದವರು ಯಾರು?
ಉತ್ತರ: ಮೂರನೇ ಕುಲೋತ್ತುಂಗ.
75) ಚೋಳರ ನೌಕಾಪಡೆ ಎಷ್ಟು ಪ್ರಬಲವಾಗಿತ್ತು?
ಉತ್ತರ: ಮಲೇಶಿಯಾ, ಇಂಡೋನೇಷ್ಯಾ ವರೆಗೂ ಹೋಗಿ ಗೆಲ್ಲುವಷ್ಟು (ಇದು ಭಾರತದ ಇತಿಹಾಸದಲ್ಲೇ ಅಪರೂಪ).
76) ಇಂದಿನ ತಮಿಳುನಾಡು, ಆಂಧ್ರದ ಕೆಲವು ಭಾಗ ಮತ್ತು ಕರ್ನಾಟಕದ ಕೋಲಾರ ಪ್ರದೇಶ ಚೋಳರ ಅಡಿಯಲ್ಲಿತ್ತೇ?
ಉತ್ತರ: ಹೌದು.
🥰 ಸ್ನೇಹಿತರೆ ಚೋಳ ಸಾಮ್ರಾಜ್ಯ (Chola Dynasty) ಭಾರತದ ಇತಿಹಾಸದ ಒಂದು ಪ್ರಮುಖ ರಾಜವಂಶದ ಬಗ್ಗೆ ಈ ಬ್ಲಾಗ್ ನಿಮಗೆ ಇಷ್ಟವಾದರೆ ❤️ ನಿಮ್ಮ ಗೆಳೆಯರಿಗೂ 👥🗣️ ಶೇರ್ ಮಾಡಿ ಮತ್ತು ನಿಮ್ಮ ಯಾವುದೇ ಪ್ರಶ್ನೆಗಳಿದ್ದರೆ (ಈ ಬ್ಲಾಗ್ ಬಗ್ಗೆ) ಕೆಳಗೆ ಕಮೆಂಟ್ 💬 ಮಾಡಿ! ಎಲ್ಲರಿಗೂ ಶುಭವಾಗಲಿ! 🌟

Comments
Post a Comment