🏛️ ಬಾದಾಮಿ ಚಾಲುಕ್ಯರು (ಕ್ರಿ.ಶ. 543 - 755): ಪರೀಕ್ಷಾ-ಕೇಂದ್ರಿತ ಪ್ರಮುಖ ಪ್ರಶ್ನೋತ್ತರಗಳು ಇತಿಹಾಸ ವಿಭಾಗದಲ್ಲಿ ನಮ್ಮ ಕರ್ನಾಟಕದ ಕೀರ್ತಿ ಪತಾಕೆಯನ್ನು ನರ್ಮದಾ ನದಿಯಿಂದ ಕಾವೇರಿಯವರೆಗೆ ಹಾರಿಸಿದ, ಕಲೆ ಮತ್ತು ವಾಸ್ತುಶಿಲ್ಪದ ತೊಟ್ಟಿಲು ಎನಿಸಿಕೊಂಡ 'ಬಾದಾಮಿ ಚಾಲುಕ್ಯರ' ಇತಿಹಾಸ ಅತ್ಯಂತ ಪ್ರಮುಖವಾದದ್ದು. ಇಮ್ಮಡಿ ಪುಲಕೇಶಿಯ ಸಾಹಸ, ಐಹೊಳೆ ಶಾಸನ ಮತ್ತು ಪಟ್ಟದಕಲ್ಲಿನ ಶಿಲ್ಪಕಲೆ ಬಹಳ ಪ್ರಮುಖವಾದವುಗಳು.ಬನ್ನಿ, ನಮ್ಮ ಕರುನಾಡಿನ ಈ ಹೆಮ್ಮೆಯ ಇತಿಹಾಸವನ್ನು ಕೆಲವು ಪ್ರಮುಖ ಪ್ರಶ್ನೋತ್ತರಗಳ ಮೂಲಕ ತಿಳಿಯೋಣ. 💠 ಬಾದಾಮಿ ಚಾಲುಕ್ಯರ ಮೂಲ, ಸ್ಥಾಪನೆ ಮತ್ತು ಲಾಂಛನ 1) ಕರ್ನಾಟಕದಲ್ಲಿ ಕದಂಬರ ನಂತರ ಬಂದ ಪ್ರಬಲ ರಾಜವಂಶ ಯಾವುದು? ಉತ್ತರ: ಬಾದಾಮಿ ಚಾಲುಕ್ಯರು. 2) ಬಾದಾಮಿ ಚಾಲುಕ್ಯರ ರಾಜಧಾನಿ ಯಾವುದಾಗಿತ್ತು? ಉತ್ತರ: ಬಾದಾಮಿ (ಇದರ ಹಳೆಯ ಹೆಸರು ವಾತಾಪಿ). 3) ಬಾದಾಮಿ ಪ್ರಸ್ತುತ ಯಾವ ಜಿಲ್ಲೆಯಲ್ಲಿದೆ? ಉತ್ತರ: ಬಾಗಲಕೋಟೆ ಜಿಲ್ಲೆ. 4) ಚಾಲುಕ್ಯರ ರಾಜಲಾಂಛನ (Emblem) ಯಾವುದಾಗಿತ್ತು? (V. Imp) ಉತ್ತರ: ವರಾಹ (ಹಂದಿ). 5) ಚಾಲುಕ್ಯರು ಮೂಲತಃ ಎಲ್ಲಿಯವರು ಎಂಬ ಬಗ್ಗೆ ಇತಿಹಾಸಕಾರರಲ್ಲಿರುವ ಪ್ರಮುಖ ವಾದ ಯಾವುದು? ಉತ್ತರ: ಅವರು ಅಪ್ಪಟ ಕನ್ನಡಿಗರು (ಸ್ಥಳೀಯರು) ಎಂಬ ವಾದವೇ ಹೆಚ್ಚು ಪ್ರಬಲವಾಗಿದೆ. 6) ಚಾಲುಕ್ಯರ ಆಡಳಿತ ಭಾಷೆ ಯಾವುದಾಗಿತ್ತು? ಉತ್ತರ: ಕನ್ನಡ ಮತ್ತು ಸಂಸ್ಕೃತ. 7) ಚಾಲುಕ್ಯ ...
ಪ್ರಾಚೀನ ಭಾರತದ ಮೇಲಿನ ವಿದೇಶಿ ದಾಳಿಗಳು Foreign Invasions in Ancient India (BC Period): ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪ್ರಶ್ನೋತ್ತರಗಳು
⚔️ ಪ್ರಾಚೀನ ಭಾರತದ ಮೇಲಿನ ವಿದೇಶಿ ದಾಳಿಗಳು Foreign Invasions in Ancient India (BC Period): ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪ್ರಶ್ನೋತ್ತರಗಳು
ಭಾರತದ ಇತಿಹಾಸದಲ್ಲಿ "ಕ್ರಿ.ಪೂ." ಅಥವಾ "ಸಾಮಾನ್ಯ ಶಕೆ ಪೂರ್ವ"ದ ವಿದೇಶಿ ದಾಳಿಗಳು ಬಹಳ ಪ್ರಮುಖವಾದವು. ಇವು ಭಾರತದ ಕಲೆ, ನಾಣ್ಯ ಪದ್ಧತಿ ಮತ್ತು ಶಿಲ್ಪಕಲೆಯ ಮೇಲೆ ದೊಡ್ಡ ಪ್ರಭಾವ ಬೀರಿದವು.
1) ಭಾರತದ ಮೇಲೆ ದಾಳಿ ಮಾಡಿದ ಅತ್ಯಂತ ಮೊದಲ ವಿದೇಶಿಯರು ಯಾರು? (V. Imp)
ಉತ್ತರ: ಪರ್ಷಿಯನ್ನರು (ಅಕೀಮೆನಿಡ್ ಸಾಮ್ರಾಜ್ಯದ ಇರಾನಿಯನ್ನರು).
2) ಭಾರತದ ಕಡೆಗೆ ದಂಡಯಾತ್ರೆ ಕೈಗೊಂಡ ಮೊದಲ ಪರ್ಷಿಯನ್ ರಾಜ ಯಾರು?
ಉತ್ತರ: ಸೈರಸ್ (Cyrus - ಕ್ರಿ.ಪೂ. 558-530).
3) ಸೈರಸ್ ಭಾರತದ ಯಾವ ಪ್ರದೇಶದವರೆಗೂ ಬಂದು ದಾಳಿ ಮಾಡಿದನು?
ಉತ್ತರ: ಗಾಂಧಾರ ಪ್ರದೇಶದ ಗಡಿಭಾಗದವರೆಗೆ (ಆದರೆ ಒಳಗೆ ಬರಲಿಲ್ಲ).
4) ವಾಯುವ್ಯ ಭಾರತವನ್ನು (ಪಂಜಾಬ್ ಮತ್ತು ಸಿಂಧ್) ಯಶಸ್ವಿಯಾಗಿ ವಶಪಡಿಸಿಕೊಂಡ ಮೊದಲ ಪರ್ಷಿಯನ್ ರಾಜ ಯಾರು?
ಉತ್ತರ: ಡೇರಿಯಸ್-I (Darius-I) ಅಥವಾ ದಾರಾಯವಸ್.
5) ಡೇರಿಯಸ್-I ಭಾರತದ ಮೇಲೆ ಯಾವಾಗ ದಾಳಿ ಮಾಡಿದನು?
ಉತ್ತರ: ಕ್ರಿ.ಪೂ. 516 ರಲ್ಲಿ.
6) ಡೇರಿಯಸ್ ನ ಶಾಸನಗಳು (ಬೆಹಿಸ್ತೂನ್) ಭಾರತದ ಯಾವ ಭಾಗವನ್ನು ಅವನ ಸಾಮ್ರಾಜ್ಯದ ಭಾಗವೆಂದು ಹೇಳುತ್ತವೆ?
ಉತ್ತರ: ಗಾಂಧಾರ (ಪಂಜಾಬ್) ಮತ್ತು ಸಿಂಧೂ ಕಣಿವೆ.
7) ಡೇರಿಯಸ್ ತನ್ನ ಸಾಮ್ರಾಜ್ಯವನ್ನು ಎಷ್ಟು ಸತ್ರಪಗಳನ್ನಾಗಿ (ಪ್ರಾಂತ) ವಿಂಗಡಿಸಿದ?
ಉತ್ತರ: 23 ಪ್ರಾಂತ
8) ಭಾರತದ ಪ್ರಾಂತ್ಯವು ಪರ್ಷಿಯನ್ ಸಾಮ್ರಾಜ್ಯದ ಎಷ್ಟನೇ ಪ್ರಾಂತ್ಯವಾಗಿತ್ತು (Satrapy)?
ಉತ್ತರ: 20ನೇ ಪ್ರಾಂತ್ಯ.
9) ಡೇರಿಯಸನ್ ಯಾವ ಎರಡು ಶಾಸನಗಳು ಗಾಂಧಾರ ಮತ್ತು ಸಿಂಧೂ ಪ್ರದೇಶ ಡೇರಿಯಸನಿಗೆ ಸೇರಿವೆ ಎಂದು ಹೇಳಿದೆ?
ಉತ್ತರ: ಪೆರ್ಸಿಪಾಲಿಸ್ ಮತ್ತು ನಕ್ಷಿರುಸ್ತುಮ್ ಶಾಸನಗಳು.
10) ಪರ್ಷಿಯನ್ ಸಾಮ್ರಾಜ್ಯಕ್ಕೆ ಅತಿ ಹೆಚ್ಚು ಚಿನ್ನದ ಧೂಳನ್ನು (Gold Dust) ಕಂದಾಯವಾಗಿ ನೀಡುತ್ತಿದ್ದ ಪ್ರಾಂತ್ಯ ಯಾವುದು?
ಉತ್ತರ: ಭಾರತದ ಪ್ರಾಂತ್ಯ.
11) ಪರ್ಷಿಯನ್ ರಾಜ ಜರ್ಕ್ಸಸ್ (Xerxes) ಗ್ರೀಕರ ವಿರುದ್ಧದ ಯುದ್ಧದಲ್ಲಿ ಯಾರನ್ನು ಬಳಸಿಕೊಂಡಿದ್ದನು?
ಉತ್ತರ: ಭಾರತೀಯ ಸೈನಿಕರನ್ನು (ಗಾಂಧಾರದ ಬಿಲ್ಲುಗಾರರನ್ನು).
12) ಭಾರತೀಯ ಸೈನಿಕರು ಬಿಳಿ ಬಟ್ಟೆ ಧರಿಸುತ್ತಿದ್ದರು ಮತ್ತು ಬಿದಿರು ಬಿಲ್ಲು ಬಳಸುತ್ತಿದ್ದರು ಎಂದು ಬರೆದ ಇತಿಹಾಸಕಾರ ಯಾರು?
ಉತ್ತರ: ಹೆರೋಡೋಟಸ್ (Herodotus).
13) ಪರ್ಷಿಯನ್ನರ ದಾಳಿಯಿಂದ ಭಾರತದಲ್ಲಿ ಯಾವ ಲಿಪಿ ಬಳಕೆಗೆ ಬಂದಿತು? (V. Imp)
ಉತ್ತರ: ಖರೋಷ್ಠಿ ಲಿಪಿ (Kharosthi Script).
14) ಖರೋಷ್ಠಿ ಲಿಪಿಯ ಬರವಣಿಗೆಯ ಶೈಲಿ ಹೇಗಿತ್ತು?
ಉತ್ತರ: ಬಲದಿಂದ ಎಡಕ್ಕೆ (Right to Left).
15) ಚಂದ್ರ ಗುಪ್ತ ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿ ಆಚರಿಸುತ್ತಿದ್ದ ಕೇಸ್ ಸ್ನಾನ ಸಮಾರಂಭ ಪರಿಚಯರಲ್ಲಿ ರೂಢಿಯಲ್ಲಿದ್ದ ಸಂಪ್ರದಾಯ ಎಂಬುದಾಗಿ ಹೇಳಲಾಗಿದೆ.
16) ಅಶೋಕನು ಕಲ್ಲಿನ ಮೇಲೆ ಶಾಸನಗಳನ್ನು ಬರೆಯಿಸುವ ಕಲೆಯನ್ನು ಯಾರಿಂದ ಕಲಿತನು?
ಉತ್ತರ: ಇರಾನಿಯನ್ನರಿಂದ (ಪರ್ಷಿಯನ್ನರಿಂದ).
17) ಮೌರ್ಯರ ಕಾಲದ ಸ್ತಂಭಗಳ ಮೇಲಿನ ಕಮಲದ ಹೂವಿನ (Bell shaped lotus) ವಿನ್ಯಾಸ ಯಾರ ಪ್ರಭಾವ?
ಉತ್ತರ: ಪರ್ಷಿಯನ್ ಕಲೆ.
18) ಪರ್ಷಿಯನ್ ಸಾಮ್ರಾಜ್ಯವನ್ನು ನಾಶ ಮಾಡಿ ಭಾರತದ ಕಡೆಗೆ ಬಂದ ಗ್ರೀಕ್ ವೀರ ಯಾರು?
ಉತ್ತರ: ಅಲೆಕ್ಸಾಂಡರ್.
19) ಅಲೆಗ್ಸಾಂಡರ ಯಾವ ದೇಶದ ರಾಜನಾಗಿದ್ದನು?
ಉತ್ತರ: ಮ್ಯಾಸಿಡೋನಿಯಾ (ಗ್ರೀಸ್).
20) ಅಲೆಗ್ಸಾಂಡರ್ ಎಲ್ಲಿ ಅಲೆಗ್ಸಾಂಡ್ರಿಯಾ ಎಂಬ ನಗರವನ್ನು ನಿರ್ಮಿಸಿದನು?
ಉತ್ತರ: ಈಜಿಪ್ಟ್
21) ಅಲೆಗ್ಸಾಂಡರ್ ಭಾರತದ ಕಡೆಗೆ ದಾಳಿ ಮಾಡಲು ಯಾವ ಪರ್ವತ ಶ್ರೇಣಿಯನ್ನು ದಾಟಿದನು?
ಉತ್ತರ: ಹಿಂದೂಕುಶ್ ಪರ್ವತ (ಖೈಬರ್ ಪಾಸ್ ಮೂಲಕ).
22) ಅಲೆಗ್ಸಾಂಡರ್ ಭಾರತದ ಮೇಲೆ ದಾಳಿ ಮಾಡಿದ ವರ್ಷ ಯಾವುದು? (Most Repeated)
ಉತ್ತರ: ಕ್ರಿ.ಪೂ. 326.
23) ಅಲೆಗ್ಸಾಂಡರ್ ಭಾರತಕ್ಕೆ ಬಂದಾಗ ತಕ್ಷಶಿಲೆಯ ರಾಜ ಯಾರಾಗಿದ್ದನು?
ಉತ್ತರ: ಅಂಬಿ (Ambhi).
24) ಭಾರತದ ಇತಿಹಾಸದಲ್ಲಿ 'ಮೊದಲ ದೇಶದ್ರೋಹಿ' ಎಂದು ಕೆಲವೊಮ್ಮೆ ಯಾರನ್ನು ಕರೆಯಲಾಗುತ್ತದೆ?
ಉತ್ತರ: ಅಂಬಿ (ಏಕೆಂದರೆ ಅವನು ಯುದ್ಧ ಮಾಡದೆ ಅಲೆಗ್ಸಾಂಡರ್ ಗೆ ಶರಣಾದನು).
25) ಅಲೆಗ್ಸಾಂಡರ್ ನನ್ನು ವೀರಾವೇಶದಿಂದ ಎದುರಿಸಿದ ಪಂಜಾಬ್ ನ ರಾಜ ಯಾರು?
ಉತ್ತರ: ಪೋರಸ್ (ಪುರುಷೋತ್ತಮ).
26) ಪೋರಸ್ ನ ರಾಜ್ಯವು ಯಾವ ನದಿಗಳ ನಡುವೆ ಇತ್ತು?
ಉತ್ತರ: ಝೀಲಂ ಮತ್ತು ಚೆನಾಬ್.
27) ಅಲೆಗ್ಸಾಂಡರ್ ಮತ್ತು ಪೋರಸ್ ನಡುವೆ ನಡೆದ ಪ್ರಸಿದ್ಧ ಯುದ್ಧ ಯಾವುದು?
ಉತ್ತರ: ಹೈಡಾಸ್ಪಸ್ ಕದನ (Battle of Hydaspes).
28) 'ಹೈಡಾಸ್ಪಸ್' ಎಂಬುದು ಯಾವ ನದಿಯ ಗ್ರೀಕ್ ಹೆಸರಾಗಿದೆ?
ಉತ್ತರ: ಝೀಲಂ ನದಿ (ವಿತಸ್ತ).
29) ಹೈಡಾಸ್ಪಸ್ ಯುದ್ಧ ನಡೆದ ವರ್ಷ ಯಾವುದು?
ಉತ್ತರ: ಕ್ರಿ.ಪೂ. 326.
30) ಈ ಯುದ್ಧದಲ್ಲಿ ಅಲೆಗ್ಸಾಂಡರ್ ಯಾರ ಧೈರ್ಯವನ್ನು ಮೆಚ್ಚಿದನು?
ಉತ್ತರ: ಪೋರಸ್.
31) "ಒಬ್ಬ ರಾಜನು ಇನ್ನೊಬ್ಬ ರಾಜನನ್ನು ಹೇಗೆ ನಡೆಸಿಕೊಳ್ಳುತ್ತಾನೋ ಹಾಗೆ ನಡೆಸು" ಎಂದು ಅಲೆಗ್ಸಾಂಡರ್ ಗೆ ಹೇಳಿದವರು ಯಾರು?
ಉತ್ತರ: ಪೋರಸ್.
32) ಅಲೆಗ್ಸಾಂಡರ್ ನ ಸೈನಿಕರು ಯಾವ ನದಿಯನ್ನು ದಾಟಲು ನಿರಾಕರಿಸಿದರು? (V. Imp)
ಉತ್ತರ: ಬಿಯಾಸ್ ನದಿ (Beas/Hyphasis).
33) ಸೈನಿಕರು ಮುಂದೆ ಹೋಗಲು ನಿರಾಕರಿಸಲು ಮುಖ್ಯ ಕಾರಣವೇನು?
ಉತ್ತರ: ದೀರ್ಘಕಾಲದ ಯುದ್ಧದ ಆಯಾಸ ಮತ್ತು ಮಗಧದ ನಂದರ ಬೃಹತ್ ಸೈನ್ಯದ ಭಯ.
34) ಅಲೆಗ್ಸಾಂಡರ್ ಭಾರತದಲ್ಲಿ ನಿರ್ಮಿಸಿದ ಎರಡು ನಗರಗಳು ಯಾವುವು?
ಉತ್ತರ: ಬೌಸಿಫೆಲಸ್ (ತನ್ನ ಕುದುರೆಯ ನೆನಪಿಗೆ) ಮತ್ತು ನಿಕಯಾ (ವಿಜಯದ ನೆನಪಿಗೆ).
35) ಅಲೆಗ್ಸಾಂಡರ್ ಭಾರತದಲ್ಲಿ ಒಟ್ಟು ಎಷ್ಟು ತಿಂಗಳು ಇದ್ದನು?
ಉತ್ತರ: 19 ತಿಂಗಳು.
36) ಅಲೆಗ್ಸಾಂಡರ್ ಭಾರತದಿಂದ ಹಿಂತಿರುಗುವಾಗ ತನ್ನ ಗೆದ್ದ ಪ್ರದೇಶಗಳ ಉಸ್ತುವಾರಿಯನ್ನು ಯಾರಿಗೆ ನೀಡಿದನು?
ಉತ್ತರ: ಸೆಲ್ಯೂಕಸ್ ನಿಕೇಟರ್ ಮತ್ತು ಇತರ ಗವರ್ನರ್‌ಗಳಿಗೆ.
37) ಅಲೆಗ್ಸಾಂಡರ್ ಮರಣ ಹೊಂದಿದ ವರ್ಷ ಯಾವುದು?
ಉತ್ತರ: ಕ್ರಿ.ಪೂ. 323.
38) ಅಲೆಗ್ಸಾಂಡರ್ ಎಲ್ಲಿ ಮರಣ ಹೊಂದಿದನು?
ಉತ್ತರ: ಬ್ಯಾಬಿಲೋನ್.
39) ಅಲೆಗ್ಸಾಂಡರ್ ದಾಳಿಯಿಂದ ಭಾರತಕ್ಕೆ ಯಾವ ಹೊಸ ಮಾರ್ಗಗಳು ತೆರೆದುಕೊಂಡವು?
ಉತ್ತರ: ಭೂಮಾರ್ಗ ಮತ್ತು ಜಲಮಾರ್ಗಗಳು (ವ್ಯಾಪಾರಕ್ಕೆ ಅನುಕೂಲವಾಯಿತು).
40) ಅಲೆಗ್ಸಾಂಡರ್ ನ ದಾಳಿಯು ಭಾರತದಲ್ಲಿ ಯಾವ ದೊಡ್ಡ ಸಾಮ್ರಾಜ್ಯದ ಸ್ಥಾಪನೆಗೆ ಪರೋಕ್ಷವಾಗಿ ಸಹಾಯ ಮಾಡಿತು?
ಉತ್ತರ: ಮೌರ್ಯ ಸಾಮ್ರಾಜ್ಯ (ಸಣ್ಣ ರಾಜ್ಯಗಳು ನಾಶವಾಗಿದ್ದರಿಂದ ಚಂದ್ರಗುಪ್ತನಿಗೆ ಸುಲಭವಾಯಿತು).
41) ಅಲೆಗ್ಸಾಂಡರ್ ನ ಸಮಕಾಲೀನನಾಗಿದ್ದ ಮಗಧದ ರಾಜ ಯಾರು?
ಉತ್ತರ: ಧನನಂದ.
42) ಅಲೆಗ್ಸಾಂಡರ್ ನ ನೌಕಾಪಡೆಯ ಮುಖ್ಯಸ್ಥ (Admiral) ಯಾರಾಗಿದ್ದನು?
ಉತ್ತರ: ನಿಯಾರ್ಕಸ್ (Nearchus).
43) ಅಲೆಗ್ಸಾಂಡರ್ ದಾಳಿಯ ಬಗ್ಗೆ ಬರೆದ ಗ್ರೀಕ್ ಇತಿಹಾಸಕಾರರು ಯಾರು?
ಉತ್ತರ: ಏರಿಯನ್, ಪ್ಲುಟಾರ್ಕ್ ಮತ್ತು ಸ್ಟ್ರಾಬೋ.
44) "ಭಾರತೀಯರು ಯುದ್ಧ ಕಲೆಯಲ್ಲಿ ಮತ್ತು ಧೈರ್ಯದಲ್ಲಿ ಏಷ್ಯಾದ ಇತರರಿಗಿಂತ ಮೇಲು" ಎಂದು ಹೇಳಿದವರು ಯಾರು?
ಉತ್ತರ: ಏರಿಯನ್ (Arrian).
ವಿಭಾಗ 3: ಮೌರ್ಯರ ಕಾಲ ಮತ್ತು ಸೆಲ್ಯೂಕಸ್ ನಿಕೇಟರ್ (ಕ್ರಿ.ಪೂ. 305)
45) ಅಲೆಗ್ಸಾಂಡರ್ ನ ಮರಣದ ನಂತರ ಅವನ ಪೂರ್ವದ ಸಾಮ್ರಾಜ್ಯದ ಒಡೆಯನಾದವನು ಯಾರು?
ಉತ್ತರ: ಸೆಲ್ಯೂಕಸ್ ನಿಕೇಟರ್.
46) ಸೆಲ್ಯೂಕಸ್ ನಿಕೇಟರ್ ಭಾರತದ ಮೇಲೆ (ಮೌರ್ಯರ ಮೇಲೆ) ಯಾವಾಗ ದಾಳಿ ಮಾಡಿದನು?
ಉತ್ತರ: ಕ್ರಿ.ಪೂ. 305 ರಲ್ಲಿ.
47) ಕ್ರಿ.ಪೂ. 305 ರ ಯುದ್ಧದಲ್ಲಿ ಸೆಲ್ಯೂಕಸ್ ನನ್ನು ಸೋಲಿಸಿದ ಭಾರತದ ರಾಜ ಯಾರು?
ಉತ್ತರ: ಚಂದ್ರಗುಪ್ತ ಮೌರ್ಯ.
48) ಯುದ್ಧದ ಒಪ್ಪಂದದ ಪ್ರಕಾರ ಸೆಲ್ಯೂಕಸ್ ತನ್ನ ಮಗಳನ್ನು ಯಾರಿಗೆ ಮದುವೆ ಮಾಡಿಕೊಟ್ಟನು?
ಉತ್ತರ: ಚಂದ್ರಗುಪ್ತ ಮೌರ್ಯನಿಗೆ (ಹೆಲೆನಾ).
49) ಸೆಲ್ಯೂಕಸ್ ಚಂದ್ರಗುಪ್ತನಿಗೆ ನೀಡಿದ ನಾಲ್ಕು ಪ್ರಾಂತ್ಯಗಳು ಯಾವುವು?
ಉತ್ತರ: ಕಾಬೂಲ್, ಕಂದಹಾರ್, ಹೆರಾತ್ ಮತ್ತು ಬಲೂಚಿಸ್ತಾನ್.
50) ಇದಕ್ಕೆ ಬದಲಾಗಿ ಚಂದ್ರಗುಪ್ತನು ಸೆಲ್ಯೂಕಸ್ ಗೆ ಏನನ್ನು ಉಡುಗೊರೆಯಾಗಿ ನೀಡಿದನು?
ಉತ್ತರ: 500 ಯುದ್ಧದ ಆನೆಗಳು.
51) ಸೆಲ್ಯೂಕಸ್ ನಿಕೇಟರ್ ಪಾಟಲಿಪುತ್ರಕ್ಕೆ ಕಳುಹಿಸಿದ ರಾಯಭಾರಿ ಯಾರು?
ಉತ್ತರ: ಮೆಗಸ್ತನೀಸ್.
52) ಮೆಗಸ್ತನೀಸ್ ಬರೆದ ಪ್ರಸಿದ್ಧ ಗ್ರಂಥ ಯಾವುದು?
ಉತ್ತರ: ಇಂಡಿಕಾ.
53) ಮೆಗಸ್ತನೀಸ್ ಇಂಡಿಕಾ ಎಂಬ ಗ್ರಂಥದ ಪ್ರಕಾರ ಮೌರ್ಯರ ಸಮಾಜವನ್ನು ಎಷ್ಟು ವರ್ಗಗಳಾಗಿ ವಿಂಗಡಿಸಲಾಗಿದೆ?
ಉತ್ತರ: 7 ವರ್ಗಗಳಾಗಿ ವಿಂಗಡಿಸಲಾಗಿದೆ.
54) ಮೌರ್ಯ ಸಾಮ್ರಾಜ್ಯದ ಪತನದ ನಂತರ (ಕ್ರಿ.ಪೂ 200ರ ಸುಮಾರಿಗೆ) ವಾಯುವ್ಯ ಭಾರತವನ್ನು ಆಕ್ರಮಿಸಿದ ಮೊದಲ ವಿದೇಶಿಯರು ಯಾರು?
ಉತ್ತರ: ಬ್ಯಾಕ್ಟ್ರಿಯನ್ ಗ್ರೀಕರು (ಇಂಡೋ-ಗ್ರೀಕರು).
55) 'ಯವನರು' ಎಂದು ಭಾರತೀಯ ಸಾಹಿತ್ಯದಲ್ಲಿ ಯಾರನ್ನು ಕರೆಯಲಾಗಿದೆ?
ಉತ್ತರ: ಗ್ರೀಕರು (Ionians).
56) ಭಾರತದ ಮೇಲೆ ದಾಳಿ ಮಾಡಿದ ಮೊದಲ ಬ್ಯಾಕ್ಟ್ರಿಯನ್ ಗ್ರೀಕ್ ರಾಜ ಯಾರು?
ಉತ್ತರ: ಡಿಮೆಟ್ರಿಯಸ್-I (Demetrius).
57) ಡಿಮೆಟ್ರಿಯಸ್ ನ ರಾಜಧಾನಿ ಯಾವುದಾಗಿತ್ತು?
ಉತ್ತರ: ಶಾಕಲ (Sialkot).
58) ಅತ್ಯಂತ ಪ್ರಸಿದ್ಧ ಇಂಡೋ-ಗ್ರೀಕ್ ರಾಜ ಯಾರು? (V. Imp)
ಉತ್ತರ: ಮಿನಾಂಡರ್ (Menander) ಅಥವಾ ಮಿಲಿಂದ.
59) ಮಿನಾಂಡರ್ ನ ಕಾಲಮಾನ ಯಾವುದು?
ಉತ್ತರ: ಸುಮಾರು ಕ್ರಿ.ಪೂ. 165 - 145.
60) ಮಿನಾಂಡರ್ ಯಾವ ಧರ್ಮಕ್ಕೆ ಮತಾಂತರಗೊಂಡನು?
ಉತ್ತರ: ಬೌದ್ಧ ಧರ್ಮ.
61) ಮಿನಾಂಡರ್ ನನ್ನು ಬೌದ್ಧ ಧರ್ಮಕ್ಕೆ ಸೇರಿಸಿದ ಸನ್ಯಾಸಿ ಯಾರು?
ಉತ್ತರ: ನಾಗಸೇನ.
62) ಮಿನಾಂಡರ್ ಮತ್ತು ನಾಗಸೇನರ ಸಂಭಾಷಣೆ ಇರುವ ಬೌದ್ಧ ಗ್ರಂಥ ಯಾವುದು?
ಉತ್ತರ: ಮಿಲಿಂದ ಪನ್ಹ (Milinda Panha - ಮಿಲಿಂದನ ಪ್ರಶ್ನೆಗಳು).
63) ಭಾರತದಲ್ಲಿ ಮೊಟ್ಟ ಮೊದಲು ಅರಸರ ಚಿತ್ರವಿರುವ ಮತ್ತು ದಿನಾಂಕವಿರುವ ನಾಣ್ಯಗಳನ್ನು (Attributed Coins) ಹೊರಡಿಸಿದವರು ಯಾರು?
ಉತ್ತರ: ಇಂಡೋ-ಗ್ರೀಕರು.
64) ಭಾರತದಲ್ಲಿ ಮೊಟ್ಟ ಮೊದಲು ಚಿನ್ನದ ನಾಣ್ಯಗಳನ್ನು (Gold Coins) ಚಲಾವಣೆಗೆ ತಂದವರು ಯಾರು?
ಉತ್ತರ: ಇಂಡೋ-ಗ್ರೀಕರು.
65) ಗ್ರೀಕ್ ಮತ್ತು ಭಾರತೀಯ ಕಲೆಯ ಮಿಶ್ರಣದಿಂದ ಹುಟ್ಟಿದ ಕಲೆ ಯಾವುದು?
ಉತ್ತರ: ಗಾಂಧಾರ ಕಲೆ.
66) ಗ್ರೀಕರು ಭಾರತೀಯ ನಾಟಕ ರಂಗಕ್ಕೆ ನೀಡಿದ ಕೊಡುಗೆ ಏನು?
ಉತ್ತರ: ಯವನಿಕಾ (ಪರದೆ - Curtain).
67) ಇಂಡೋ-ಗ್ರೀಕರ ಕೊನೆಯ ರಾಜ ಯಾರು?
ಉತ್ತರ: ಹರ್ಮಿಯಸ್.
68) ಪತಂಜಲಿ ಮಹರ್ಷಿಗಳು ಬರೆದ 'ಮಹಾಭಾಷ್ಯ'ದಲ್ಲಿ ಯಾವ ದಾಳಿಯ ಉಲ್ಲೇಖವಿದೆ?
ಉತ್ತರ: ಯವನರ (ಗ್ರೀಕರ) ದಾಳಿ (ಸಾಕೇತ ಮತ್ತು ಮಾಧ್ಯಮಿಕ ನಗರಗಳ ಮೇಲೆ).
69) ಗ್ರೀಕರ ನಂತರ ಭಾರತಕ್ಕೆ ಬಂದ ಮಧ್ಯ ಏಷ್ಯಾದ ಅಲೆಮಾರಿ ಬುಡಕಟ್ಟು ಯಾವುದು?
ಉತ್ತರ: ಶಕರು (Sakas).
70) ಶಕರು ಭಾರತಕ್ಕೆ ಬರಲು ಮುಖ್ಯ ಕಾರಣವೇನು?
ಉತ್ತರ: ಚೀನಾದಲ್ಲಿ ಮಹಾ ಗೋಡೆ ನಿರ್ಮಾಣ ಮತ್ತು 'ಯು-ಚಿ' ಬುಡಕಟ್ಟಿನವರು ಅವರನ್ನು ಒದ್ದೋಡಿಸಿದ್ದು.
71) ಭಾರತದಲ್ಲಿ ಶಕರ ಮೊದಲ ರಾಜ ಯಾರು?
ಉತ್ತರ: ಮಾವೋಸ್ (Maues) ಅಥವಾ ಮೋಗಾ (ಕ್ರಿ.ಪೂ. 80).
72) ಶಕರು ಭಾರತದಲ್ಲಿ ಎಷ್ಟು ಶಾಖೆಗಳಾಗಿ ಹಂಚಿಹೋಗಿದ್ದರು?
ಉತ್ತರ: 5 ಶಾಖೆಗಳು (ತಕ್ಷಶಿಲೆ, ಮಥುರಾ, ಉಜ್ಜಯಿನಿ ಇತ್ಯಾದಿ).
73) ಉಜ್ಜಯಿನಿಯ ಸ್ಥಳೀಯ ರಾಜನೊಬ್ಬನು ಶಕರನ್ನು ಕ್ರಿ.ಪೂ. 57 ರಲ್ಲಿ ಸೋಲಿಸಿದನು. ಅವನ ಬಿರುದು ಏನಾಗಿತ್ತು?
ಉತ್ತರ: ವಿಕ್ರಮಾದಿತ್ಯ.
74) ಕ್ರಿ.ಪೂ. 57 ರಲ್ಲಿ ಶಕರ ಮೇಲಿನ ವಿಜಯದ ನೆನಪಿಗಾಗಿ ಯಾವ ಶಕೆ (Era) ಆರಂಭವಾಯಿತು? (V. Imp)
ಉತ್ತರ: ವಿಕ್ರಮ ಶಕೆ (Vikrama Samvat).
75) ತಕ್ಷಶಿಲೆಯ ಪ್ರಸಿದ್ಧ ಶಕ ರಾಜ ಯಾರು?
ಉತ್ತರ: ಅಜೇಸ್-I (Azes-I).
76) ಶಕರ ಆಳ್ವಿಕೆಯಲ್ಲಿ ಆಡಳಿತಗಾರರನ್ನು (Governors) ಏನೆಂದು ಕರೆಯುತ್ತಿದ್ದರು?
ಉತ್ತರ: ಕ್ಷತ್ರಪರು (Satraps).
77) ಪಾಶ್ಚಿಮಾತ್ಯ ಕ್ಷತ್ರಪರಲ್ಲಿ (Western Satraps) ಅತ್ಯಂತ ಪ್ರಸಿದ್ಧ ರಾಜ ಯಾರು? (ಇವನು ಕ್ರಿ.ಶ. ಆರಂಭದಲ್ಲಿ ಆಳಿದರೂ, ಇವನ ವಂಶ ಕ್ರಿ.ಪೂ. ದಲ್ಲಿ ಬಂದಿತು)
ಉತ್ತರ: ರುದ್ರದಮನ-I.
78) 'ಹೆಲಿಯೋಡೋರಸ್' (Heliodorus) ಎಂಬ ಗ್ರೀಕ್ ರಾಯಭಾರಿ ಯಾವ ರಾಜನ ಆಸ್ಥಾನಕ್ಕೆ ಬಂದಿದ್ದನು?
ಉತ್ತರ: ಶುಂಗ ವಂಶದ ಭಾಗಭದ್ರ (ಕ್ರಿ.ಪೂ. 2ನೇ ಶತಮಾನ).
79) ಹೆಲಿಯೋಡೋರಸ್ ನಿರ್ಮಿಸಿದ ಪ್ರಸಿದ್ಧ ಸ್ತಂಭ ಯಾವುದು?
ಉತ್ತರ: ಬೆಸ್‌ನಗರದ ಗರುಡ ಸ್ತಂಭ (ಮಧ್ಯಪ್ರದೇಶ).
80) ಹೆಲಿಯೋಡೋರಸ್ ಯಾವ ಧರ್ಮಕ್ಕೆ ಮತಾಂತರಗೊಂಡಿದ್ದನು?
ಉತ್ತರ: ಭಾಗವತ ಧರ್ಮ (ವೈಷ್ಣವ ಧರ್ಮ).
81) ಗ್ರೀಕರ ಖಗೋಳಶಾಸ್ತ್ರದ ಪ್ರಭಾವದಿಂದ ಭಾರತದಲ್ಲಿ ರಚಿತವಾದ ಗ್ರಂಥ ಯಾವುದು?
ಉತ್ತರ: ಗಾರ್ಗಿ ಸಂಹಿತೆ.
82) 'ಹೊರಾಶಾಸ್ತ್ರ' (ಜೋತಿಷ್ಯ) ಎಂಬ ಪದವು ಯಾವ ಭಾಷೆಯಿಂದ ಬಂದಿದೆ?
ಉತ್ತರ: ಗ್ರೀಕ್ ಭಾಷೆ.
83) ಕ್ರಿ.ಪೂ. ಅವಧಿಯಲ್ಲಿ ಭಾರತದ ಮೇಲೆ ದಾಳಿ ಮಾಡಿದವರ ಸರಿಯಾದ ಕ್ರಮ ಯಾವುದು?
ಉತ್ತರ: ಪರ್ಷಿಯನ್ನರು -> ಗ್ರೀಕರು (ಅಲೆಕ್ಸಾಂಡರ್) -> ಇಂಡೋ-ಗ್ರೀಕರು -> ಶಕರು.
84) ಭಾರತದಲ್ಲಿ ಚರ್ಮದ ಬೂಟುಗಳು ಮತ್ತು ಕೋಟುಗಳನ್ನು ಬಳಸುವ ಪದ್ಧತಿಯನ್ನು ಪರಿಚಯಿಸಿದವರು ಯಾರು?
ಉತ್ತರ: ಶಕರು ಮತ್ತು ಕುಶಾನರು (ಮೂಲತಃ ಇವರ ಆಗಮನ ಕ್ರಿ.ಪೂ ದಲ್ಲೇ ಆಗಿತ್ತು).
85) ಕ್ರಿ.ಪೂ. 1ನೇ ಶತಮಾನದಲ್ಲಿ ವಾಯುವ್ಯ ಭಾರತವನ್ನು ಆಕ್ರಮಿಸಿದ ಪಾರ್ಥಿಯನ್ನರು (Pahlavas) ಮೂಲತಃ ಎಲ್ಲಿಯವರು?
ಉತ್ತರ: ಇರಾನ್.
🥰 ಸ್ನೇಹಿತರೆ ಈ ಬ್ಲಾಗ್ ನಿಮಗೆ ಇಷ್ಟವಾದರೆ ❤️ ನಿಮ್ಮ ಗೆಳೆಯರಿಗೂ 👥🗣️ ಶೇರ್ ಮಾಡಿ ಮತ್ತು ನಿಮ್ಮ ಯಾವುದೇ ಪ್ರಶ್ನೆಗಳಿದ್ದರೆ (ಈ ಬ್ಲಾಗ್ ಬಗ್ಗೆ) ಕೆಳಗೆ ಕಮೆಂಟ್ 💬 ಮಾಡಿ! ಎಲ್ಲರಿಗೂ ಶುಭವಾಗಲಿ! 🌟

Comments
Post a Comment