🏛️ ಬಾದಾಮಿ ಚಾಲುಕ್ಯರು (ಕ್ರಿ.ಶ. 543 - 755): ಪರೀಕ್ಷಾ-ಕೇಂದ್ರಿತ ಪ್ರಮುಖ ಪ್ರಶ್ನೋತ್ತರಗಳು ಇತಿಹಾಸ ವಿಭಾಗದಲ್ಲಿ ನಮ್ಮ ಕರ್ನಾಟಕದ ಕೀರ್ತಿ ಪತಾಕೆಯನ್ನು ನರ್ಮದಾ ನದಿಯಿಂದ ಕಾವೇರಿಯವರೆಗೆ ಹಾರಿಸಿದ, ಕಲೆ ಮತ್ತು ವಾಸ್ತುಶಿಲ್ಪದ ತೊಟ್ಟಿಲು ಎನಿಸಿಕೊಂಡ 'ಬಾದಾಮಿ ಚಾಲುಕ್ಯರ' ಇತಿಹಾಸ ಅತ್ಯಂತ ಪ್ರಮುಖವಾದದ್ದು. ಇಮ್ಮಡಿ ಪುಲಕೇಶಿಯ ಸಾಹಸ, ಐಹೊಳೆ ಶಾಸನ ಮತ್ತು ಪಟ್ಟದಕಲ್ಲಿನ ಶಿಲ್ಪಕಲೆ ಬಹಳ ಪ್ರಮುಖವಾದವುಗಳು.ಬನ್ನಿ, ನಮ್ಮ ಕರುನಾಡಿನ ಈ ಹೆಮ್ಮೆಯ ಇತಿಹಾಸವನ್ನು ಕೆಲವು ಪ್ರಮುಖ ಪ್ರಶ್ನೋತ್ತರಗಳ ಮೂಲಕ ತಿಳಿಯೋಣ. 💠 ಬಾದಾಮಿ ಚಾಲುಕ್ಯರ ಮೂಲ, ಸ್ಥಾಪನೆ ಮತ್ತು ಲಾಂಛನ 1) ಕರ್ನಾಟಕದಲ್ಲಿ ಕದಂಬರ ನಂತರ ಬಂದ ಪ್ರಬಲ ರಾಜವಂಶ ಯಾವುದು? ಉತ್ತರ: ಬಾದಾಮಿ ಚಾಲುಕ್ಯರು. 2) ಬಾದಾಮಿ ಚಾಲುಕ್ಯರ ರಾಜಧಾನಿ ಯಾವುದಾಗಿತ್ತು? ಉತ್ತರ: ಬಾದಾಮಿ (ಇದರ ಹಳೆಯ ಹೆಸರು ವಾತಾಪಿ). 3) ಬಾದಾಮಿ ಪ್ರಸ್ತುತ ಯಾವ ಜಿಲ್ಲೆಯಲ್ಲಿದೆ? ಉತ್ತರ: ಬಾಗಲಕೋಟೆ ಜಿಲ್ಲೆ. 4) ಚಾಲುಕ್ಯರ ರಾಜಲಾಂಛನ (Emblem) ಯಾವುದಾಗಿತ್ತು? (V. Imp) ಉತ್ತರ: ವರಾಹ (ಹಂದಿ). 5) ಚಾಲುಕ್ಯರು ಮೂಲತಃ ಎಲ್ಲಿಯವರು ಎಂಬ ಬಗ್ಗೆ ಇತಿಹಾಸಕಾರರಲ್ಲಿರುವ ಪ್ರಮುಖ ವಾದ ಯಾವುದು? ಉತ್ತರ: ಅವರು ಅಪ್ಪಟ ಕನ್ನಡಿಗರು (ಸ್ಥಳೀಯರು) ಎಂಬ ವಾದವೇ ಹೆಚ್ಚು ಪ್ರಬಲವಾಗಿದೆ. 6) ಚಾಲುಕ್ಯರ ಆಡಳಿತ ಭಾಷೆ ಯಾವುದಾಗಿತ್ತು? ಉತ್ತರ: ಕನ್ನಡ ಮತ್ತು ಸಂಸ್ಕೃತ. 7) ಚಾಲುಕ್ಯ ...
ಭಾರತದ ಇತಿಹಾಸದಲ್ಲೇ ಅತ್ಯಂತ ವಿಶಾಲವಾದ ಮತ್ತು ಸುಸಂಘಟಿತವಾದ ಸಾಮ್ರಾಜ್ಯವೆಂದರೆ ಅದು ಮೌರ್ಯ ಸಾಮ್ರಾಜ್ಯ (Mauryan Empire). ಚಂದ್ರಗುಪ್ತ ಮೌರ್ಯನ ಪರಾಕ್ರಮ, ಚಾಣಕ್ಯನ ತಂತ್ರಗಾರಿಕೆ ಮತ್ತು ಅಶೋಕನ ಧರ್ಮ ಪ್ರಚಾರ ಈ ಸಾಮ್ರಾಜ್ಯವನ್ನು ಅಮರವಾಗಿಸಿವೆ.
1) ಮೌರ್ಯ ಸಾಮ್ರಾಜ್ಯದ ಬಗ್ಗೆ ಮಾಹಿತಿ ನೀಡುವ ಅತ್ಯಂತ ಪ್ರಮುಖ ಕೃತಿ 'ಅರ್ಥಶಾಸ್ತ್ರ'ವನ್ನು ಬರೆದವರು ಯಾರು?
ಉತ್ತರ: ಕೌಟಿಲ್ಯ (ಚಾಣಕ್ಯ / ವಿಷ್ಣುಗುಪ್ತ).
2) 'ಅರ್ಥಶಾಸ್ತ್ರ' ಕೃತಿಯು ಯಾವ ವಿಷಯಕ್ಕೆ ಸಂಬಂಧಿಸಿದೆ?
ಉತ್ತರ: ರಾಜನೀತಿ ಮತ್ತು ಆಡಳಿತ (Politics and Administration).
3) ಅರ್ಥಶಾಸ್ತ್ರವನ್ನು ಯಾವ ಭಾಷೆಯಲ್ಲಿ ಬರೆಯಲಾಗಿದೆ?
ಉತ್ತರ: ಸಂಸ್ಕೃತ.
4) ಮೆಗಸ್ತನೀಸ್ ಬರೆದ ಪ್ರಸಿದ್ಧ ಗ್ರಂಥ ಯಾವುದು?
ಉತ್ತರ: ಇಂಡಿಕಾ (Indica).
5) ಮೆಗಸ್ತನೀಸ್ ಯಾರ ಆಸ್ಥಾನಕ್ಕೆ ಬಂದಿದ್ದನು?
ಉತ್ತರ: ಚಂದ್ರಗುಪ್ತ ಮೌರ್ಯ.
6) 'ಮುದ್ರಾರಾಕ್ಷಸ' ಎಂಬ ಸಂಸ್ಕೃತ ನಾಟಕವನ್ನು ಬರೆದವರು ಯಾರು?
ಉತ್ತರ: ವಿಶಾಖದತ್ತ.
7) ಮುದ್ರಾರಾಕ್ಷಸ ನಾಟಕದ ಕಥಾವಸ್ತು ಏನು?
ಉತ್ತರ: ಚಾಣಕ್ಯನು ನಂದರನ್ನು ಸೋಲಿಸಿ ಚಂದ್ರಗುಪ್ತನನ್ನು ರಾಜನನ್ನಾಗಿ ಮಾಡಿದ ತಂತ್ರಗಾರಿಕೆ.
8) ಅಶೋಕನ ಶಾಸನಗಳನ್ನು (Edicts) ಮೊಟ್ಟ ಮೊದಲು ಓದಿದವರು (Deciphered) ಯಾರು?
ಉತ್ತರ: ಜೇಮ್ಸ್ ಪ್ರಿನ್ಸೆಪ್ (1837 ರಲ್ಲಿ).
9) ಅಶೋಕನ ಶಾಸನಗಳು ಪ್ರಮುಖವಾಗಿ ಯಾವ ಲಿಪಿಯಲ್ಲಿವೆ?
ಉತ್ತರ: ಬ್ರಾಹ್ಮಿ ಲಿಪಿ (Brahmi Script).
10) ವಾಯುವ್ಯ ಭಾರತದಲ್ಲಿ ಅಶೋಕನ ಶಾಸನಗಳು ಯಾವ ಲಿಪಿಯಲ್ಲಿವೆ?
ಉತ್ತರ: ಖರೋಷ್ಠಿ ಲಿಪಿ.
11) ಅಫ್ಘಾನಿಸ್ತಾನದಲ್ಲಿ ದೊರೆತ ಅಶೋಕನ ಶಾಸನಗಳು ಯಾವ ಭಾಷೆ/ಲಿಪಿಯಲ್ಲಿವೆ?
ಉತ್ತರ: ಗ್ರೀಕ್ ಮತ್ತು ಅರಾಮಿಕ್.
12) ಶ್ರೀಲಂಕಾದ ಯಾವ ಬೌದ್ಧ ಗ್ರಂಥಗಳು ಮೌರ್ಯರ ಬಗ್ಗೆ ಮಾಹಿತಿ ನೀಡುತ್ತವೆ?
ಉತ್ತರ: ದೀಪವಂಶ ಮತ್ತು ಮಹಾವಂಶ.
13) ಪುರಾಣಗಳ ಪ್ರಕಾರ ಮೌರ್ಯರು ಯಾವ ವರ್ಣಕ್ಕೆ ಸೇರಿದವರು?
ಉತ್ತರ: ಶೂದ್ರರು (ಆದರೆ ಬೌದ್ಧ ಗ್ರಂಥಗಳ ಪ್ರಕಾರ ಕ್ಷತ್ರಿಯರು).
14) 'ಕಲ್ಪಸೂತ್ರ' ಎಂಬ ಜೈನ ಗ್ರಂಥವನ್ನು ಬರೆದವರು ಯಾರು?
ಉತ್ತರ: ಭದ್ರಬಾಹು.
15) ಕಾಶ್ಮೀರದ ಇತಿಹಾಸ ತಿಳಿಸುವ 'ರಾಜತರಂಗಿಣಿ' (ಕಲ್ಹಣ ಬರೆದದ್ದು) ಅಶೋಕನ ಬಗ್ಗೆ ಏನು ಹೇಳುತ್ತದೆ?
ಉತ್ತರ: ಅಶೋಕನು ಶ್ರೀನಗರವನ್ನು ಕಟ್ಟಿಸಿದನು ಎಂದು ಹೇಳುತ್ತದೆ.
16) ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು?
ಉತ್ತರ: ಚಂದ್ರಗುಪ್ತ ಮೌರ್ಯ.
17) ಚಂದ್ರಗುಪ್ತ ಮೌರ್ಯನು ಯಾರನ್ನು ಸೋಲಿಸಿ ಮೌರ್ಯ ಸಾಮ್ರಾಜ್ಯ ಸ್ಥಾಪಿಸಿದನು?
ಉತ್ತರ: ಧನನಂದ (ನಂದ ವಂಶದ ಕೊನೆಯ ರಾಜ).
18) ಚಂದ್ರಗುಪ್ತನ ಗುರು ಮತ್ತು ಪ್ರಧಾನ ಮಂತ್ರಿ ಯಾರು?
ಉತ್ತರ: ಚಾಣಕ್ಯ (ಕೌಟಿಲ್ಯ).
19) ಚಂದ್ರಗುಪ್ತ ಮೌರ್ಯನು ಸೆಲ್ಯೂಕಸ್ ನಿಕೇಟರ್ ನನ್ನು ಸೋಲಿಸಿದ ವರ್ಷ ಯಾವುದು?
ಉತ್ತರ: ಕ್ರಿ.ಪೂ. 305.
20) ಸೆಲ್ಯೂಕಸ್ ನಿಕೇಟರ್ ಯಾರು?
ಉತ್ತರ: ಅಲೆಕ್ಸಾಂಡರ್ ನ ಸೇನಾಪತಿ (ಗ್ರೀಕ್ ರಾಜ).
21) ಚಂದ್ರಗುಪ್ತ ಮೌರ್ಯನಿಗೆ ಸೆಲ್ಯೂಕಸ್ ನೀಡಿದ 4 ಪ್ರಾಂತ್ಯಗಳು ಯಾವುವು?
ಉತ್ತರ: ಕಾಬೂಲ್, ಕಂದಹಾರ್, ಹೆರಾತ್ ಮತ್ತು ಬಲೂಚಿಸ್ತಾನ್.
22) ಸೆಲ್ಯೂಕಸ್ ನ ಮಗಳಾದ ಹೆಲೆನಾಳನ್ನು ಯಾರು ಮದುವೆಯಾದರು?
ಉತ್ತರ: ಚಂದ್ರಗುಪ್ತ ಮೌರ್ಯ.
23) ಚಂದ್ರಗುಪ್ತ ಮೌರ್ಯನು ಸೆಲ್ಯೂಕಸ್ ಗೆ ಉಡುಗೊರೆಯಾಗಿ ಏನು ನೀಡಿದನು?
ಉತ್ತರ: 500 ಯುದ್ಧದ ಆನೆಗಳು.
24) ಗ್ರೀಕ್ ಬರಹಗಾರರು ಚಂದ್ರಗುಪ್ತನನ್ನು ಯಾವ ಹೆಸರಿನಿಂದ ಕರೆದಿದ್ದಾರೆ?
ಉತ್ತರ: ಸ್ಯಾಂಡ್ರೋಕೋಟ್ಸ್ (Sandrocottus).
25) ಚಂದ್ರಗುಪ್ತ ಮೌರ್ಯನು ಜೀವನದ ಕೊನೆಯಲ್ಲಿ ಯಾವ ಧರ್ಮವನ್ನು ಸ್ವೀಕರಿಸಿದನು?
ಉತ್ತರ: ಜೈನ ಧರ್ಮ.
26) ಚಂದ್ರಗುಪ್ತನ ಜೈನ ಗುರು ಯಾರು?
ಉತ್ತರ: ಭದ್ರಬಾಹು.
27) ಚಂದ್ರಗುಪ್ತನು ಮಗಧದಲ್ಲಿ ಉಂಟಾದ ಎಷ್ಟು ವರ್ಷಗಳ ಬರಗಾಲದ ನಂತರ ರಾಜ್ಯ ತ್ಯಜಿಸಿದನು?
ಉತ್ತರ: 12 ವರ್ಷಗಳ ಬರಗಾಲ.
28) ಚಂದ್ರಗುಪ್ತ ಮೌರ್ಯನು ಎಲ್ಲಿಗೆ ವಲಸೆ ಬಂದನು?
ಉತ್ತರ: ಶ್ರವಣಬೆಳಗೊಳ (ಕರ್ನಾಟಕ).
29) ಚಂದ್ರಗುಪ್ತನು ಯಾವ ವ್ರತದ ಮೂಲಕ ಮರಣ ಹೊಂದಿದನು?
ಉತ್ತರ: ಸಲ್ಲೇಖನ ವ್ರತ (ಉಪವಾಸದ ಮೂಲಕ ದೇಹತ್ಯಾಗ).
30) ಶ್ರವಣಬೆಳಗೊಳದಲ್ಲಿ ಚಂದ್ರಗುಪ್ತನು ತಪಸ್ಸು ಮಾಡಿದ ಬೆಟ್ಟ ಯಾವುದು?
ಉತ್ತರ: ಚಂದ್ರಗಿರಿ ಬೆಟ್ಟ.
31) ಚಂದ್ರಗುಪ್ತ ಮೌರ್ಯನ ಮಗ ಮತ್ತು ಉತ್ತರಾಧಿಕಾರಿ ಯಾರು?
ಉತ್ತರ: ಬಿಂದುಸಾರ.
32) ಗ್ರೀಕರು ಬಿಂದುಸಾರನನ್ನು ಏನೆಂದು ಕರೆದಿದ್ದಾರೆ?
ಉತ್ತರ: ಅಮಮಿತ್ರೋಚೇಟ್ಸ್ (Amitrochates) - ಸಂಸ್ಕೃತದಲ್ಲಿ 'ಅಮಿತ್ರಘಾತ'.
33) 'ಅಮಿತ್ರಘಾತ' ಎಂದರೇನು?
ಉತ್ತರ: ಶತ್ರುಗಳ ಸಂಹಾರಿ (Slayer of enemies).
34) ಬಿಂದುಸಾರನ ಆಸ್ಥಾನಕ್ಕೆ ಬಂದ ಸಿರಿಯಾ ದೇಶದ ರಾಯಭಾರಿ ಯಾರು?
ಉತ್ತರ: ಡೈಮಾಕಸ್ (Deimachus).
35) ಬಿಂದುಸಾರನ ಆಸ್ಥಾನಕ್ಕೆ ಬಂದ ಈಜಿಪ್ಟ್ ದೇಶದ ರಾಯಭಾರಿ ಯಾರು?
ಉತ್ತರ: ಡಯೋನಿಸಿಯಸ್.
36) ಬಿಂದುಸಾರನು ಯಾವ ಧರ್ಮದ (ಪಂಥದ) ಅನುಯಾಯಿಯಾಗಿದ್ದನು?
ಉತ್ತರ: ಆಜೀವಿಕ ಪಂಥ (Ajivika Sect).
37) ಬಿಂದುಸಾರನ ಕಾಲದಲ್ಲಿ ದಂಗೆ ಎದ್ದ ನಗರ ಯಾವುದು?
ಉತ್ತರ: ತಕ್ಷಶಿಲೆ.
38) ತಕ್ಷಶಿಲೆಯ ದಂಗೆಯನ್ನು ಹತ್ತಿಕ್ಕಲು ಬಿಂದುಸಾರನು ಯಾರನ್ನು ಕಳುಹಿಸಿದನು?
ಉತ್ತರ: ತನ್ನ ಮಗ ಅಶೋಕನನ್ನು.
39) ಬಿಂದುಸಾರನು ಸಿರಿಯಾದ ರಾಜನ ಬಳಿ ಯಾವ ಮೂರು ವಸ್ತುಗಳನ್ನು ಕೇಳಿದ್ದನು?
ಉತ್ತರ: ಸಿಹಿ ಮದ್ಯ, ಒಣ ಅಂಜೂರ ಮತ್ತು ಒಬ್ಬ ತತ್ವಜ್ಞಾನಿ (ಸೋಫಿಸ್ಟ್).
40) ಸಿರಿಯಾದ ರಾಜನು ಏನನ್ನು ಕಳುಹಿಸಲು ನಿರಾಕರಿಸಿದನು?
ಉತ್ತರ: ತತ್ವಜ್ಞಾನಿಯನ್ನು (ಗ್ರೀಕ್ ಕಾನೂನಿನ ಪ್ರಕಾರ ಪಂಡಿತರ ಮಾರಾಟ ನಿಷಿದ್ಧವಾಗಿತ್ತು).
41) ಮೌರ್ಯ ವಂಶದ ಅತ್ಯಂತ ಶ್ರೇಷ್ಠ ದೊರೆ ಯಾರು?
ಉತ್ತರ: ಅಶೋಕ.
42) ಅಶೋಕನು ಮಗಧದ ಸಿಂಹಾಸನ ಏರಿದ ವರ್ಷ ಯಾವುದು?
ಉತ್ತರ: ಕ್ರಿ.ಪೂ. 268 (ಪಟ್ಟಾಭಿಷೇಕ).
43) ಅಶೋಕನು ರಾಜನಾಗುವ ಮೊದಲು ಯಾವ ಪ್ರಾಂತ್ಯದ ವೈಸರಾಯ್ (ರಾಜ್ಯಪಾಲ) ಆಗಿದ್ದನು?
ಉತ್ತರ: ಉಜ್ಜಯಿನಿ ಮತ್ತು ತಕ್ಷಶಿಲೆ.
44) ಅಶೋಕನು ತನ್ನ 99 ಸಹೋದರರನ್ನು ಕೊಂದು ರಾಜನಾದನು ಎಂದು ಹೇಳುವ ಗ್ರಂಥ ಯಾವುದು?
ಉತ್ತರ: ಮಹಾವಂಶ (ಶ್ರೀಲಂಕಾದ ಬೌದ್ಧ ಗ್ರಂಥ).
45) ಅಶೋಕನ ಜೀವನವನ್ನೇ ಬದಲಿಸಿದ ಯುದ್ಧ ಯಾವುದು? (V. Imp)
ಉತ್ತರ: ಕಳಿಂಗ ಯುದ್ಧ.
46) ಕಳಿಂಗ ಯುದ್ಧ ನಡೆದ ವರ್ಷ ಯಾವುದು?
ಉತ್ತರ: ಕ್ರಿ.ಪೂ. 261 (ಪಟ್ಟಾಭಿಷೇಕದ 8ನೇ ವರ್ಷ).
47) ಕಳಿಂಗ ಯುದ್ಧದ ಬಗ್ಗೆ ಮಾಹಿತಿ ನೀಡುವ ಅಶೋಕನ ಶಾಸನ ಯಾವುದು?
ಉತ್ತರ: 13ನೇ ಬಂಡೆಗಲ್ಲು ಶಾಸನ (13th Rock Edict).
48) ಕಳಿಂಗ ಯುದ್ಧದಲ್ಲಿ ಅಶೋಕನ ವಿರುದ್ಧ ಹೋರಾಡಿದ ರಾಜ ಯಾರು ಎಂದು ನಂಬಲಾಗಿದೆ?
ಉತ್ತರ: ರಾಜ ಅನಂತಪದ್ಮನಾಭ (ಶುದ್ಧಧರ್ಮ).
49) ಕಳಿಂಗ ಯುದ್ಧದ ನಂತರ ಅಶೋಕನು ಯಾವ ನೀತಿಯನ್ನು ಕೈಬಿಟ್ಟನು?
ಉತ್ತರ: ಭೇರಿಘೋಷ (ಯುದ್ಧದ ಘೋಷಣೆ).
50) ಯುದ್ಧದ ನಂತರ ಅಶೋಕನು ಯಾವ ನೀತಿಯನ್ನು ಅಳವಡಿಸಿಕೊಂಡನು?
ಉತ್ತರ: ಧಮ್ಮಘೋಷ (ಧರ್ಮದ ಪ್ರಚಾರ).
51) ಅಶೋಕನು ಯಾವ ಧರ್ಮವನ್ನು ಸ್ವೀಕರಿಸಿದನು?
ಉತ್ತರ: ಬೌದ್ಧ ಧರ್ಮ.
52) ಅಶೋಕನಿಗೆ ಬೌದ್ಧ ಧರ್ಮದ ದೀಕ್ಷೆ ನೀಡಿದವರು ಯಾರು?
ಉತ್ತರ: ಉಪಗುಪ್ತ (ಮತ್ತು ನಿಗ್ರೋದ ಎಂಬ ಬಾಲಕ).
53) ಅಶೋಕನು 3ನೇ ಬೌದ್ಧ ಸಮ್ಮೇಳನವನ್ನು (Council) ಎಲ್ಲಿ ನಡೆಸಿದನು?
ಉತ್ತರ: ಪಾಟಲಿಪುತ್ರ (ಕ್ರಿ.ಪೂ 250).
54) ಅಶೋಕನು ಬೌದ್ಧ ಧರ್ಮ ಪ್ರಚಾರಕ್ಕಾಗಿ ತನ್ನ ಮಗ ಮತ್ತು ಮಗಳನ್ನು ಎಲ್ಲಿಗೆ ಕಳುಹಿಸಿದನು?
ಉತ್ತರ: ಶ್ರೀಲಂಕಾ (ಸಿಲೋನ್).
55) ಅಶೋಕನ ಮಗ ಮತ್ತು ಮಗಳ ಹೆಸರೇನು?
ಉತ್ತರ: ಮಹೇಂದ್ರ ಮತ್ತು ಸಂಘಮಿತ್ರೆ.
56) ಅಶೋಕನು ಕರ್ನಾಟಕಕ್ಕೆ (ಬನವಾಸಿಗೆ) ಕಳುಹಿಸಿದ ಧರ್ಮ ಪ್ರಚಾರಕ ಯಾರು?
ಉತ್ತರ: ರಕ್ಷಿತ.
57) ಅಶೋಕನು ಮಹಿಷ ಮಂಡಲಕ್ಕೆ (ಮೈಸೂರು) ಕಳುಹಿಸಿದ ಪ್ರಚಾರಕ ಯಾರು?
ಉತ್ತರ: ಮಹಾದೇವ.
58) ಅಶೋಕನ ಶಾಸನಗಳಲ್ಲಿ ಅವನನ್ನು ಏನೆಂದು ಕರೆಯಲಾಗಿದೆ?
ಉತ್ತರ: ದೇವನಾಂಪ್ರಿಯ ಪ್ರಿಯದರ್ಶಿ (ದೇವರಿಗೆ ಪ್ರಿಯನಾದವನು).
59) ಅಶೋಕನ ಹೆಸರು 'ಅಶೋಕ' ಎಂದು ಉಲ್ಲೇಖಿಸಿರುವ ಶಾಸನಗಳು ಯಾವುವು? (V. Imp)
ಉತ್ತರ: ಮಸ್ಕಿ (ಕರ್ನಾಟಕ), ಗುಜ್ಜರ, ನಿಟ್ಟೂರು ಮತ್ತು ಉಡೆಗೋಳಂ.
60) ಕರ್ನಾಟಕದಲ್ಲಿ ಅಶೋಕನ ಶಾಸನ ಮೊದಲು ದೊರೆತ ಸ್ಥಳ ಯಾವುದು?
ಉತ್ತರ: ಮಸ್ಕಿ (ರಾಯಚೂರು ಜಿಲ್ಲೆ) - 1915 ರಲ್ಲಿ ಸಿ. ಬೀಡನ್ ಕಂಡುಹಿಡಿದರು.
61) ಅಶೋಕನ ಅತಿ ದೊಡ್ಡ ಬಂಡೆಗಲ್ಲು ಶಾಸನ ಯಾವುದು?
ಉತ್ತರ: 13ನೇ ಶಾಸನ.
62) ಅಶೋಕನು ಲುಂಬಿನಿಗೆ ಭೇಟಿ ನೀಡಿದ ನೆನಪಿಗಾಗಿ ಹೊರಡಿಸಿದ ಶಾಸನ ಯಾವುದು?
ಉತ್ತರ: ರುಮ್ಮಿಂದೈ ಶಾಸನ (Rummindei Pillar Inscription).
63) ರುಮ್ಮಿಂದೈ ಶಾಸನವು ಯಾವ ವಿಷಯದ ಬಗ್ಗೆ ತಿಳಿಸುತ್ತದೆ?
ಉತ್ತರ: ಅಶೋಕನು ಲುಂಬಿನಿಯ ತೆರಿಗೆಯನ್ನು (ಬಲಿ) ಕಡಿಮೆ ಮಾಡಿದ ವಿಷಯ (Tax concession).
64) ಅಶೋಕನ ಧರ್ಮ ಪ್ರಚಾರಕ್ಕಾಗಿ ನೇಮಿಸಿದ ಅಧಿಕಾರಿಗಳನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಧರ್ಮ ಮಹಾಮಾತ್ರರು.
65) ಅಶೋಕನು ಪ್ರಾಣಿ ಬಲಿಯನ್ನು ನಿಷೇಧಿಸಿದ ಶಾಸನ ಯಾವುದು?
ಉತ್ತರ: 1ನೇ ಬಂಡೆಗಲ್ಲು ಶಾಸನ.
66) ವೈದ್ಯಕೀಯ ಚಿಕಿತ್ಸೆ (ಮನುಷ್ಯರು ಮತ್ತು ಪ್ರಾಣಿಗಳಿಗೆ) ಬಗ್ಗೆ ತಿಳಿಸುವ ಶಾಸನ ಯಾವುದು?
ಉತ್ತರ: 2ನೇ ಬಂಡೆಗಲ್ಲು ಶಾಸನ.
67) ಅಶೋಕನ ರಾಣಿ ಶಾಸನ (Queen's Edict) ಎಲ್ಲಿ ಕಂಡುಬಂದಿದೆ?
ಉತ್ತರ: ಅಲಹಾಬಾದ್ (ಪ್ರಯಾಗ).
68) ಅಶೋಕನ ರಾಣಿ ಶಾಸನದಲ್ಲಿ ಉಲ್ಲೇಖಿಸಲಾದ ರಾಣಿ ಯಾರು?
ಉತ್ತರ: ಕರುವಕಿ (Karuvaaki).
69) ಬರಾಬರ್ ಗುಹೆಗಳನ್ನು (Barabar Caves) ಅಶೋಕನು ಯಾರಿಗೆ ದಾನವಾಗಿ ನೀಡಿದನು?
ಉತ್ತರ: ಆಜೀವಿಕರಿಗೆ.
70) ಅಶೋಕನು ಕಟ್ಟಿಸಿದ ಸ್ತೂಪಗಳ ಸಂಖ್ಯೆ ಎಷ್ಟು ಎಂದು ಹೇಳಲಾಗುತ್ತದೆ?
ಉತ್ತರ: 84,000 ಸ್ತೂಪಗಳು.
71) ಮೌರ್ಯರ ಆಡಳಿತ ವ್ಯವಸ್ಥೆ ಹೇಗಿತ್ತು?
ಉತ್ತರ: ಕೇಂದ್ರೀಕೃತ ಆಡಳಿತ (Centralized Administration).
72) ಕೌಟಿಲ್ಯನ ಪ್ರಕಾರ ರಾಜ್ಯಕ್ಕೆ ಎಷ್ಟು ಅಂಗಗಳಿರಬೇಕು?
ಉತ್ತರ: ಏಳು ಅಂಗಗಳು (ಸಪ್ತಾಂಗ ಸಿದ್ಧಾಂತ).
73) ಮೌರ್ಯರ ಸಾಮ್ರಾಜ್ಯವನ್ನು ಎಷ್ಟು ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು?
ಉತ್ತರ: 5 ಪ್ರಾಂತ್ಯಗಳು (ಪ್ರಾಚ್ಯ, ಉತ್ತರಾಪಥ, ದಕ್ಷಿಣಾಪಥ, ಅವಂತಿ, ಕಳಿಂಗ).
74) ಮೌರ್ಯರ ಕಾಲದ ಪ್ರಧಾನ ಮಂತ್ರಿಯನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಮಂತ್ರಿನ್ ಅಥವಾ ಪುರೋಹಿತ.
75) ಕಂದಾಯ ಸಂಗ್ರಹಿಸುವ ಮುಖ್ಯ ಅಧಿಕಾರಿಯನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಸಮಾಹರ್ತ (Samaharta).
76) ಖಜಾನೆಯ ಮುಖ್ಯ ಅಧಿಕಾರಿಯನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಸನ್ನಿದಾತ (Sannidhata).
77) ನಗರದ ಆಡಳಿತ ನೋಡಿಕೊಳ್ಳುವ ಅಧಿಕಾರಿಯನ್ನು ಮೆಗಸ್ತನೀಸ್ ಏನೆಂದು ಕರೆದಿದ್ದಾನೆ?
ಉತ್ತರ: ಆಸ್ಟಿ ನೋಮಾಯ್ (Astinomoi).
78) ಮೌರ್ಯರ ಕಾಲದ ಗೂಢಚಾರರನ್ನು (Spies) ಏನೆಂದು ಕರೆಯುತ್ತಿದ್ದರು?
ಉತ್ತರ: ಗೂಢಪುರುಷರು.
79) ಒಂದೇ ಕಡೆ ನೆಲೆಸಿರುವ ಗೂಢಚಾರರನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಸಂಸ್ಥಾ (Sanstha).
80) ಸಂಚರಿಸುವ ಗೂಢಚಾರರನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಸಂಚಾರ (Sanchara).
81) ಮೌರ್ಯರ ಕಾಲದ ಮುಖ್ಯ ಕಂದಾಯ ಯಾವುದಾಗಿತ್ತು?
ಉತ್ತರ: ಭೂ ಕಂದಾಯ (ಬೆಳೆಯ 1/6 ನೇ ಭಾಗ).
82) ಸರ್ಕಾರಿ ಭೂಮಿಯನ್ನು (Crown Land) ಏನೆಂದು ಕರೆಯುತ್ತಿದ್ದರು?
ಉತ್ತರ: ಸೀತಾ ಭೂಮಿ.
83) ನೀರಾವರಿ ತೆರಿಗೆಯನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಉದಕ ಭಾಗ.
84) ತುರ್ತು ಪರಿಸ್ಥಿತಿಯಲ್ಲಿ ವಿಧಿಸುವ ತೆರಿಗೆಯನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಪ್ರಣಯ (Pranaya).
85) ಮೌರ್ಯರ ಕಾಲದಲ್ಲಿ ಸಿವಿಲ್ ನ್ಯಾಯಾಲಯವನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಧರ್ಮಸ್ಥಿಯ (Dharmasthiya).
86) ಕ್ರಿಮಿನಲ್ ನ್ಯಾಯಾಲಯವನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಕಂಟಕಶೋಧನ (Kantakasodhana).
87) ಜಿಲ್ಲಾ ಮಟ್ಟದ ಆಡಳಿತಗಾರರನ್ನು ಅಶೋಕನ ಶಾಸನಗಳಲ್ಲಿ ಏನೆಂದು ಕರೆಯಲಾಗಿದೆ?
ಉತ್ತರ: ರಾಜುಕರು (Rajukas).
88) ಮೌರ್ಯರ ಕಾಲದಲ್ಲಿ ಬಳಕೆಯಲ್ಲಿದ್ದ ಬೆಳ್ಳಿ ನಾಣ್ಯ ಯಾವುದು?
ಉತ್ತರ: ಪಣ (Pana).
89) ತಾಮ್ರದ ನಾಣ್ಯವನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಮಶಕ (Mashaka).
90) ಸುದರ್ಶನ ಕೆರೆಯನ್ನು (ಗುಜರಾತ್) ನಿರ್ಮಿಸಿದ ಚಂದ್ರಗುಪ್ತನ ರಾಜ್ಯಪಾಲ ಯಾರು?
ಉತ್ತರ: ಪುಷ್ಯಗುಪ್ತ.
91) ಅಶೋಕನ ಕಾಲದಲ್ಲಿ ಸುದರ್ಶನ ಕೆರೆಗೆ ಕಾಲುವೆ ನಿರ್ಮಿಸಿದವರು ಯಾರು?
ಉತ್ತರ: ತುಷಾಸ್ಪ (Tushaspha).
92) ಮೌರ್ಯರ ಸೈನ್ಯವು 6 ಮಂಡಳಿಗಳಿಂದ (Boards) ನಿರ್ವಹಿಸಲ್ಪಡುತ್ತಿತ್ತು ಎಂದು ಹೇಳಿದವರು ಯಾರು?
ಉತ್ತರ: ಮೆಗಸ್ತನೀಸ್.
93) ಮೌರ್ಯರ ಕಾಲದಲ್ಲಿ ಶಿಕ್ಷಣದ ಪ್ರಮುಖ ಕೇಂದ್ರ ಯಾವುದಾಗಿತ್ತು?
ಉತ್ತರ: ತಕ್ಷಶಿಲೆ.
94) ಮಹಿಳೆಯರನ್ನು ಅಂಗರಕ್ಷಕರನ್ನಾಗಿ ನೇಮಿಸಿಕೊಳ್ಳುವ ಪದ್ಧತಿ ಯಾರ ಕಾಲದಲ್ಲಿತ್ತು?
ಉತ್ತರ: ಚಂದ್ರಗುಪ್ತ ಮೌರ್ಯ.
95) ಮೌರ್ಯರ ಕಾಲದಲ್ಲಿ ಗುಲಾಮಗಿರಿ (Slavery) ಇರಲಿಲ್ಲ ಎಂದು ಬರೆದವರು ಯಾರು?
ಉತ್ತರ: ಮೆಗಸ್ತನೀಸ್ (ಆದರೆ ಕೌಟಿಲ್ಯನು 9 ಬಗೆಯ ಗುಲಾಮರ ಬಗ್ಗೆ ಬರೆದಿದ್ದಾನೆ).
96) ಭಾರತದ ರಾಷ್ಟ್ರೀಯ ಲಾಂಛನವನ್ನು (ನಾಲ್ಕು ಸಿಂಹಗಳು) ಎಲ್ಲಿಂದ ಪಡೆಯಲಾಗಿದೆ?
ಉತ್ತರ: ಸಾರನಾಥದ ಅಶೋಕನ ಸ್ತಂಭದಿಂದ.
97) ಸಾರನಾಥ ಸ್ತಂಭದ ಚಕ್ರದಲ್ಲಿ ಎಷ್ಟು ಕಡ್ಡಿಗಳಿವೆ (Spokes)?
ಉತ್ತರ: 24 ಕಡ್ಡಿಗಳು (ಧರ್ಮಚಕ್ರ).
98) ಅಶೋಕನ ಸ್ತಂಭಗಳನ್ನು ಯಾವ ಕಲ್ಲಿನಿಂದ ಮಾಡಲಾಗಿದೆ?
ಉತ್ತರ: ಚುನಾರ್ ಮರಳುಗಲ್ಲು (Chunar Sandstone).
99) ಅಶೋಕನ ಸ್ತಂಭಗಳ ಮೇಲ್ಮೈ ಹೇಗಿದೆ?
ಉತ್ತರ: ಕನ್ನಡಿಯಂತೆ ಹೊಳಪುಳ್ಳದ್ದಾಗಿದೆ (Mauryan Polish).
100) ಭಾರತದ ಅತ್ಯಂತ ಪ್ರಸಿದ್ಧ ಸ್ತೂಪ ಯಾವುದು?
ಉತ್ತರ: ಸಾಂಚಿ ಸ್ತೂಪ (ಮಧ್ಯಪ್ರದೇಶ).
101) ಬಿಹಾರದಲ್ಲಿರುವ ಮೌರ್ಯರ ಕಾಲದ ಅರಮನೆಯ ಅವಶೇಷಗಳು (ಕುಮ್ರಹಾರ್) ಯಾವುದರಿಂದ ಮಾಡಲ್ಪಟ್ಟಿವೆ?
ಉತ್ತರ: ಮರದಿಂದ (Wood).
102) "ಮೌರ್ಯರ ಅರಮನೆಗಳನ್ನು ದೇವತೆಗಳೇ ಕಟ್ಟಿರಬೇಕು" ಎಂದು ಹೇಳಿದ ಚೀನೀ ಯಾತ್ರಿಕ ಯಾರು?
ಉತ್ತರ: ಫಾಹಿಯಾನ್.
103) ಮೌರ್ಯರ ಕಾಲದ ಯಕ್ಷ ಮತ್ತು ಯಕ್ಷಿಣಿ ವಿಗ್ರಹಗಳು ಎಲ್ಲಿ ದೊರೆತಿವೆ?
ಉತ್ತರ: ದಿದಾರಗಂಜ್ (ಯಕ್ಷಿಣಿ) ಮತ್ತು ಪರ್ಖಾಮ್ (ಯಕ್ಷ).
104) ಬರಾಬರ್ ಗುಹೆಗಳಲ್ಲಿ ಅತ್ಯಂತ ಪ್ರಸಿದ್ಧ ಗುಹೆ ಯಾವುದು?
ಉತ್ತರ: ಲೋಮಸ್ ಋಷಿ ಗುಹೆ.
105) ಭಾರತದಲ್ಲಿ ಕಲ್ಲಿನ ಗುಹಾಂತರ ದೇವಾಲಯಗಳ (Rock-cut caves) ಆರಂಭ ಯಾರ ಕಾಲದಲ್ಲಿ ಆಯಿತು?
ಉತ್ತರ: ಮೌರ್ಯರ ಕಾಲದಲ್ಲಿ (ಅಶೋಕ ಮತ್ತು ಅವನ ಮೊಮ್ಮಗ ದಶರಥ).
106) ಮೌರ್ಯ ಸಾಮ್ರಾಜ್ಯವು ಅಶೋಕನ ನಂತರ ಎಷ್ಟು ಭಾಗವಾಯಿತು?
ಉತ್ತರ: ಎರಡು ಭಾಗ (ಪಶ್ಚಿಮ ಮತ್ತು ಪೂರ್ವ).
107) ಪಶ್ಚಿಮ ಭಾಗವನ್ನು ಆಳಿದ ಅಶೋಕನ ಮಗ ಯಾರು?
ಉತ್ತರ: ಕುಣಾಲ.
108) ಕಾಶ್ಮೀರದಲ್ಲಿ ಬೌದ್ಧ ಧರ್ಮದ ವಿರೋಧಿಯಾಗಿದ್ದ ಅಶೋಕನ ಮಗ ಯಾರು?
ಉತ್ತರ: ಜಲೌಕ.
109) ಮೌರ್ಯ ವಂಶದ ಕೊನೆಯ ರಾಜ ಯಾರು? (V. Imp)
ಉತ್ತರ: ಬೃಹದ್ರಥ.
110) ಬೃಹದ್ರಥನನ್ನು ಕೊಂದವರು ಯಾರು?
ಉತ್ತರ: ಪುಷ್ಯಮಿತ್ರ ಶುಂಗ (ಅವನ ಸೇನಾಪತಿ).
111) ಮೌರ್ಯ ಸಾಮ್ರಾಜ್ಯದ ಅಂತ್ಯ ಯಾವಾಗ ಆಯಿತು?
ಉತ್ತರ: ಕ್ರಿ.ಪೂ. 185.
112) ಮೌರ್ಯ ಸಾಮ್ರಾಜ್ಯದ ಪತನಕ್ಕೆ ಒಂದು ಪ್ರಮುಖ ಕಾರಣವೇನು?
ಉತ್ತರ: ದುರ್ಬಲ ಉತ್ತರಾಧಿಕಾರಿಗಳು ಮತ್ತು ಬ್ರಾಹ್ಮಣರ ವಿರೋಧ (ಪುಷ್ಯಮಿತ್ರನ ನೇತೃತ್ವದಲ್ಲಿ).
113) ಅಶೋಕನ ಅಹಿಂಸಾ ನೀತಿಯು ಸೈನ್ಯವನ್ನು ದುರ್ಬಲಗೊಳಿಸಿತು ಎಂಬ ವಾದವಿದೆಯೇ?
ಉತ್ತರ: ಹೌದು, ಕೆಲವು ಇತಿಹಾಸಕಾರರು ಹಾಗೆ ನಂಬುತ್ತಾರೆ.
114) ಮೌರ್ಯರ ರಾಜಧಾನಿ ಪಾಟಲಿಪುತ್ರದ ಪ್ರಸ್ತುತ ಹೆಸರೇನು?
ಉತ್ತರ: ಪಾಟ್ನಾ.
115) ಅರ್ಥಶಾಸ್ತ್ರದಲ್ಲಿ 'ಸಪ್ತಾಂಗ'ಗಳು ಯಾವುವು?
ಉತ್ತರ: ಸ್ವಾಮಿ (ರಾಜ), ಅಮಾತ್ಯ, ಜನಪದ, ದುರ್ಗ, ಕೋಶ, ದಂಡ (ಸೈನ್ಯ), ಮಿತ್ರ.
116) ಭಾರತದಲ್ಲಿ ಜನಗಣತಿ (Census) ಮೊದಲು ಆರಂಭವಾದದ್ದು ಯಾರ ಕಾಲದಲ್ಲಿ?
ಉತ್ತರ: ಮೌರ್ಯರ ಕಾಲದಲ್ಲಿ (ನಗರ ಆಡಳಿತದ ಭಾಗವಾಗಿ).
117) ಮೌರ್ಯರ ಕಾಲದ ಶಿಲ್ಪಕಲೆಯಲ್ಲಿ ಯಾವ ಪ್ರಾಣಿಗಳು ಸಾಮಾನ್ಯವಾಗಿ ಕಂಡುಬರುತ್ತವೆ?
ಉತ್ತರ: ಆನೆ, ಕುದುರೆ, ಎತ್ತು ಮತ್ತು ಸಿಂಹ.
118) ಅಶೋಕನು ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ನೀಡಿದ ಭೇಟಿಯನ್ನು (ಪ್ರವಾಸ) ಏನೆಂದು ಕರೆಯುತ್ತಿದ್ದರು?
ಉತ್ತರ: ಧಮ್ಮ ಯಾತ್ರೆ.
119) ಮೌರ್ಯರ ಕಾಲದಲ್ಲಿ ವಿಧವೆಯರಿಗೆ ಮರುಮದುವೆಯಾಗುವ ಹಕ್ಕು ಇತ್ತೇ?
ಉತ್ತರ: ಹೌದು, ಅರ್ಥಶಾಸ್ತ್ರದ ಪ್ರಕಾರ ಇತ್ತು.
120) ಮೌರ್ಯರ ಆಡಳಿತದ ಪ್ರಭಾವ ಮುಂದಿನ ಯಾವ ಸಾಮ್ರಾಜ್ಯಗಳ ಮೇಲೆ ಕಂಡುಬಂದಿತು?
ಉತ್ತರ: ಗುಪ್ತರು ಮತ್ತು ದಕ್ಷಿಣದ ಶಾತವಾಹನರ ಮೇಲೆ.
🥰 ಸ್ನೇಹಿತರೆ ಈ ಬ್ಲಾಗ್ ನಿಮಗೆ ಇಷ್ಟವಾದರೆ ❤️ ನಿಮ್ಮ ಗೆಳೆಯರಿಗೂ 👥🗣️ ಶೇರ್ ಮಾಡಿ ಮತ್ತು ನಿಮ್ಮ ಯಾವುದೇ ಪ್ರಶ್ನೆಗಳಿದ್ದರೆ (ಈ ಬ್ಲಾಗ್ ಬಗ್ಗೆ) ಕೆಳಗೆ ಕಮೆಂಟ್ 💬 ಮಾಡಿ! ಎಲ್ಲರಿಗೂ ಶುಭವಾಗಲಿ! 🌟

Comments
Post a Comment